ಶ್ರೀ ಬಾಳಕೃಷ್ಣ ಮಹಾರಾಜರ ಧ್ಯಾನ ಮಂದಿರ ಉದ್ಘಾಟನೆ 23ರಿಂದ

Balakrishana Maharaj
Published on

ಸವಣೂರ: ಪಟ್ಟಣದ ಶ್ರೀ ಬಾಳಕೃಷ್ಣ ನಗರದಲ್ಲಿ ನೂತನವಾಗಿ ನಿರ್ವಿುಸಿರುವ ಶ್ರೀ ಬಾಳಕೃಷ್ಣ ಮಹಾರಾಜರ ಧ್ಯಾನ ಮಂದಿರದ ಉದ್ಘಾಟನೆ, ಮೂರ್ತಿ ಪ್ರಾಣಪ್ರತಿಷ್ಠಾಪನೆ ಮತ್ತು ಕಳಸಾರೋಹಣ, ಧರ್ಮ ಸಭೆ ಕಾರ್ಯಕ್ರಮ ಡಿ. 23 ಹಾಗೂ 24ರಂದು ಏರ್ಪಡಿಸಲಾಗಿದೆ.

23ರಂದು ಬೆಳಗ್ಗೆ 8 ಗಂಟೆಗೆ ಗಂಟೆಗೆ ಮಕರ ಲಗ್ನದ ಶುಭ ಮುಹೂರ್ತದಲ್ಲಿ ಸದ್ಗುರು ಬಾಳಕೃಷ್ಣ ಮಹಾರಾಜರ ಅಮೃತ ಶಿಲಾ ಮೂರ್ತಿಯ ಮೆರವಣಿಗೆಯು ಪೂರ್ಣಕುಂಭ, ವಾದ್ಯವೈಭವ, ಕಲಾಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗದಗ ರಸ್ತೆಯಲ್ಲಿರುವ ಬಾಳಕೃಷ್ಣ ನಗರದ ನೂತನ ಧ್ಯಾನ ಮಂದಿರ ತಲುಪುವುದು.

ನಂತರ ಶ್ರೀ ಬಾಳು ಮಹಾರಾಜರ ನೇತೃತ್ವದಲ್ಲಿ ಹಾಗೂ ಹಾನಗಲ್ಲ ಶಂಕರ ಭಟ್ಟಶಾಸ್ತ್ರಿ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

ಸಂಜೆ ನೂತನ ಅಮೃತ ಶಿಲಾ ಮೂರ್ತಿಯ ಧಾನ್ಯಾಧಿವಾಸ, ಜಲಾಧಿವಾಸ ಮತ್ತು ಶಯ್ಯಾಧಿವಾಸ ಜರುಗುವುದು.

ಡಿ. 24ರಂದು ಬೆಳಗ್ಗೆ 9 ಗಂಟೆಗೆ ಸಲ್ಲುವ ಮಕರ ಲಗ್ನದ ಶುಭಾಂಶದಲ್ಲಿ ಸದ್ಗುರು ಬಾಳಕೃಷ್ಣ ಮಹಾರಾಜರ ಅಮೃತ ಶಿಲಾಮೂರ್ತಿ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ, ಉತ್ತರಾಂಗ ಪೂಜಾ, ಬಲಿದಾನ, ಪೂರ್ಣಾಹುತಿ ಮಹಾಪೂಜೆ ನೆರವೇರುವುದು. ಬೆಳಗ್ಗೆ 11 ಗಂಟೆಗೆ ಧರ್ಮಸಭೆ ಜರುಗುವುದು.

ಧರ್ಮಸಭೆ: ನಂದೇಶ್ವರನ ಶ್ರೀ ಸದ್ಗುರು ಬಾಳು ಮಹಾರಾಜರು ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಧರ್ಮಸಭೆ ಉದ್ಘಾಟಿಸುವರು. ಸಂಸದ ಬಸವರಾಜ ಬೊಮ್ಮಾಯಿ ನೂತನ ಮಂದಿರ ಉದ್ಘಾಟಿಸುವರು.

ಸೂರ್ಯವಂಶ ಕ್ಷತ್ರೀಯ ಕಲಾಲ ಖಾಟಿಕ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ ಗಂಡಗಾಳೇಕರ ಗೌರವ ಉಪಸ್ಥಿತಿ ಇರುವರು. ಸವಣೂರ ತಾಲೂಕು ಸೂರ್ಯವಂಶ ಕ್ಷತ್ರೀಯ ಕಲಾಲ ಖಾಟಿಕ ಸಮಾಜದ ಅಧ್ಯಕ್ಷ ಕೃಷ್ಣಾಜಿ ಕಲಾಲ ಅಧ್ಯಕ್ಷತೆ ವಹಿಸುವರು. ಸಮಾಜದ ತಾಲೂಕು ಘಟಕದ ಗೌರವಾಧ್ಯಕ್ಷರಾದ ಪ್ರಕಾಶ ಕಲಾಲ ಹಾಗೂ ಮೋಹನ ಕಲ್ಯಾಣಕರ ಉಪಸ್ಥಿತರಿರುವರು.

ಶಾಸಕರಾದ ರುದ್ರಪ್ಪ ಲಮಾಣಿ, ಯಾಸೀರಖಾನ ಪಠಾಣ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಕೆ. ಸಿದ್ದರಾಮಣ್ಣ, ಸೂರ್ಯವಂಶ ಕ್ಷತ್ರಿಯ ಕಲಾಲ ಖಾಟಿಕ ಸಮಾಜದ ಮಹಿಳಾ ರಾಜಾಧ್ಯಕ್ಷೆ ಅನುರಾಧಾ ಘೊಡಕೆ, ಗ್ರಾಪಂ ಸದಸ್ಯೆ ಲಕ್ಷ್ಮೀ ಕಲಾಲ, ಪ್ರಮುಖರಾದ ಡಾ. ಅಹಲ್ಯಾಬಾಯಿ ಕಲಾಲ, ರಾಮಚಂದ್ರ ಕಲಾಲ, ಚನ್ನಪ್ಪ ಕಲಾಲ, ಮಾಲತೇಶ ಪತ್ತೆಹುಲಿ, ಭರತ ಬೊಮ್ಮಾಯಿ, ಅಲ್ಲಾವುದ್ದೀನ ಮನಿಯಾರ, ಶೈಲಾ ಮುದಿಗೌಡ್ರ, ಸುಮಂತ ಸಿಂಧೂರ, ಸಂಬಾಜಿ ಕಲಾಲ, ನಾಗರಾಜ ಜೋರಾಪುರಿ, ರಾಮಚಂದ್ರ ಕಲಾಲ, ಹೆಗ್ಗಪ್ಪ ಕಲಾಲ ಹಾಗೂ ಇತರರು ಪಾಲ್ಗೊಳ್ಳುವವರು. ಮಾಲತೇಶ ಮಿರಜಕರ ಕಾರ್ಯಕ್ರಮ ನಿರ್ವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net