ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಜನಮಾನಸದಲ್ಲಿ ಅಜರಾಮರ

FotoJet (2)
Published on

 ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆ | ಡಾ.ಬಾಲಗಂಗಾಧರನಾಥ ಸ್ವಾಮೀಜಿ ಸಂಸ್ಮರಣಾ ಮಹೋತ್ಸವಕ್ಕೆ ಚಾಲನೆ

ಬಿಡದಿ : ಜಾತಿ ಧರ್ಮ ಭೇದವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡುವ ಮೂಲಕ ಬಾಲಗಂಗಾಧರನಾಥ ಶ್ರೀಗಳು ಇಂದಿಗೂ ಜನಮಾನಸದಲ್ಲಿ ಅಜರಾಮರರಾಗಿ ಉಳಿದಿದ್ದಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ಬಿಡದಿಯ ಬಿಜಿಎಸ್ ವೃತ್ತದಲ್ಲಿ ಬಿಜಿಎಸ್ ಸೇವಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 12ನೇ ವರ್ಷದ ಸಂಸ್ಮರಣಾ ಮಹೋತ್ಸವ ಹಾಗೂ 80ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರು ಸಮಾಜ ಸುಧಾರಕರಾಗಿ, ಜಾತಿ ಧರ್ಮ ಭೇದ ಮರೆತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನದಾಸೋಹ ನೀಡಿದ್ದರು. ಸಮಾಜದಲ್ಲಿ ಮನುಷ್ಯನ ಬದುಕುವ ರೀತಿ ಮತ್ತು ಸಮಾಜದ ಸುಧಾರಣೆಗೆ ಹಲವು ಮೌಲ್ಯಯುತ ಸಲಹೆ ಮತ್ತು ಸಹಕಾರ ಶ್ರೀ ಮಠದ ಮೂಲಕ ಮಾಡಿದ್ದಾರೆ. ಮಠವನ್ನು ಶ್ರೀಗಳ ರೀತಿಯಲ್ಲೆ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.

ಜಾತಿ ಧರ್ಮಕ್ಕೆ ಸೀಮಿತರಾಗದೆ ಸಮಾಜಮುಖಿ ಸೇವೆಯ ಮೂಲಕ ಎಲ್ಲ ವರ್ಗದ ಜನರ ಆರಾಧ್ಯ ದೈವವಾದ ಶ್ರೀಗಳ ಜಯಂತ್ಯುತ್ಸವ ಮತ್ತು ಪುಣ್ಯಾರಾಧನೆ ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ ಅವರ ಆದರ್ಶ ಮತ್ತು ತತ್ತ್ವಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳೊಣ ಎಂದರು.

ಬಿಜಿಎಸ್ ಸೇವಾ ಸಮಿತಿ ಅಧ್ಯಕ್ಷ ಸಿ.ಉಮೇಶ್ ಮಾತನಾಡಿ, ಈ ಮಣ್ಣಲ್ಲಿ ಹುಟ್ಟಿ ಇಡೀ ಜಗತ್ತೆ ರಾಮನಗರ ಜಿಲ್ಲೆಯನ್ನು ಗುರುತಿಸುವ ಸಾಮಾಜಿಕ ಕೆಲಸಗಳನ್ನು ಶ್ರೀಗಳು ಮಾಡಿದ್ದಾರೆ. ಯಾವುದೇ ಜಾತಿ ಧರ್ಮಕ್ಕೆ ಸೀಮಿತರಾಗದೆ ಸಮಾಜಮುಖಿ ಸೇವೆಯ ಮೂಲಕ ಎಲ್ಲ ಜಾತಿ ವರ್ಗದ ಜನರ ಆರಾಧ್ಯ ದೈವರಾಗಿರುವ ಸ್ವಾಮೀಜಿ ಅವರ ಜಯಂತ್ಯುತ್ಸವ ಮತ್ತು ಪುಣ್ಯಾರಾಧನೆ ಕಾರ್ಯಕ್ರಮವನ್ನು ಸಮಿತಿ ವತಿಯಿಂದ ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ. ಈ ಪುಣ್ಯ ಕಾರ್ಯಕ್ಕೆ ಸಮಾಜದ ಅನೇಕರು ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಬಮುಲ್ ನಿರ್ದೇಶಕ ಪಿ.ನಾಗರಾಜು, ಬಿಜಿಎಸ್ ಸೇವಾ ಸಮಿತಿ ಖಜಾಂಚಿ ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಎಂ.ರಾಜಶೇಖರ್, ಶಿವಕುಮಾರ್, ನಿರ್ದೇಶಕರಾದ ರಾಜಶೇಖರ್, ಸುರೇಶ್ ಬಾಬು, ಭಾನುಪ್ರಕಾಶ್, ಶ್ರೀನಿವಾಸ್, ಬೆಟ್ಟಸ್ವಾಮಿ ಪುರಸಭಾ ಸದಸ್ಯರಾದ ಹೊಂಬಯ್ಯ, ನವೀನ್‌ಕುಮಾರ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net