

ಎನ್.ಆರ್.ಪುರ: ಇಲ್ಲಿನ ಮೇದರಬೀದಿ ಶ್ರೀ ಅಂತರಘಟ್ಟಮ್ಮ ದೇವಿಯು ನೂತನ ಬಂಗಾರದ ಮುಖ ಧಾರಣೆ ಹಾಗೂ ಬೆಳ್ಳಿ ಪಲ್ಲಕ್ಕಿಯೊಂದಿಗೆ ಹಾಗೂ ಪೂರ್ಣ ಕುಂಭದೊಂದಿಗೆ ಕೊಲ್ಲಮ್ಮದೇವಿ, ಕರಿಯಮ್ಮ ದೇವೆತಗಳ ಪಲ್ಲಕ್ಕಿಗಳ ಜತೆಗೂಡಿ ರಾಜಬೀದಿ ಉತ್ಸವದೊಂದಿಗೆ ಗುರುವಾರ ಪುರ ಪ್ರವೇಶ ಮಾಡಿತು.
ಪುರಪ್ರವೇಶ ಅಂಗವಾಗಿ ಪಟ್ಟಣದ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದಿಂದ ಮೇದರಬೀದಿ ಶ್ರೀಅಂತರಘಟ್ಟಮ್ಮ ದೇವಿ ದೇವಸ್ಥಾನದವರೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಆಕರ್ಷಕ ಸಿಡಿಮದ್ದಿನ ಪ್ರದರ್ಶನ, ನಾಸಿಕ್‌ಡೋಲ್, ವಾದ್ಯ, ಬೃಹತ್ ಬೊಂಬೆಗಳ ಪ್ರದರ್ಶನ, ಅಲಂಕೃತಗೊಂಡ ಎತ್ತುಗಳು, ಒಂಟೆ, ಕುದುರೆ ರಾಜಬೀದಿ ಉತ್ಸವಕ್ಕೆ ಮೆರುಗು ನೀಡಿತು. ಬಸ್‌ನಿಲ್ದಾಣದ ಸಮೀಪದ ಬೃಹತ್ ಗಾತ್ರದ ಚಾಮುಂಡೇಶ್ವರಿ ದೇವಿ ಮಹಾದ್ವಾರ ನೋಡುಗರ ಗಮನ ಸೆಳೆಯಿತು. ರಾಜಬೀದಿ ಉತ್ಸವ ನಂತರ ಅನ್ನ ಸಂತರ್ಪಣಾ ಕಾರ್ಯಕ್ರಮ ಜರುಗಿತು.