

ಬೀರೂರು: ಬೀರೂರು ಹೋಬಳಿ ಎಮ್ಮೆದೊಡ್ಡಿ ವ್ಯಾಪ್ತಿಯ ಬೆಳ್ಳಿಗುತ್ತಿಯಲ್ಲಿ ಶ್ರೀಅಂತರಘಟ್ಟಮ್ಮ ದೇವಿ ನೂತನ ದೇವಾಲಯ ಪ್ರವೇಶ ಹಾಗೂ ವಿಗ್ರಹ ಪ್ರತಿಷ್ಟಾಪನೆ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಬಲಿಪಾಡ್ಯಮಿಯಂದು ಬೆಳಗ್ಗೆ ದೇವಾಲಯ ಶುದ್ಧಿ , ಸಂಜೆ ಗೋಧೋಳಿ ಲಗ್ನದಲ್ಲಿ ಧ್ವಜಾರೋಹಣ, ವಿಶ್ವಕರ್ಮ ಪೂಜೆಯೊಂದಿಗೆ ದೇವಾಲಯವನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು. ನಂತರ ರಾತ್ರಿ ಗಣಪತಿ ಪೂಜೆ, ರಕ್ಷೋಘ್ನ ಹೋಮ, ವಾಸ್ತು ಹೋಮ ನಡೆಯಿತು. ಬೆಳಗ್ಗೆ ಗಂಗಾಪೂಜೆ, ಕಾಮಧೇನು ಪೂಜೆ, ಪ್ರವೇಶ ಬಲಿ, ಆಲಯ ಪ್ರವೇಶ, ನಂತರ ಮಹಾಗಣಪತಿ ಪೂಜೆ, ಪುಣ್ಯಾಹ, ನಾಂದಿ, ಪಂಚಕಲಶ ಆರಾಧನೆ ಮತ್ತು ನವದುರ್ಗಿಯರ ಪೂಜೆ, ಪರಿವಾರ ದೇವತೆಗಳ ಪೂಜೆ, ಸಂಜೆ ಗಣಹೋಮ, ಅಮ್ಮನವರ ವಿಗ್ರಹಕ್ಕೆ ಪಂಚಗವ್ಯ ವಿಧಿ, ವಿಧಾನಗಳು ನೆರವೇರಿತು.
ಶುಕ್ರವಾರ ದೇವಿ ನೂತನ ವಿಗ್ರಹ ಅಷ್ಟಬಂಧ ಪ್ರತಿಷ್ಠಾಪನೆ, ನಂತರ ರುದ್ರಾಭಿಷೇಕ, ಹರಿದ್ರಾ-ಕುಂಕುಮ ಅಭಿಷೇಕ, ನಾರಿಕೇಳ ಅಭಿಷೇಕ, ಕುಂಭಾಭಿಷೇಕ, ದುರ್ಗಾ ಹೋಮ, ಪೂರ್ಣಾಹುತಿ ನಂತರ ಬೇರಗಂಡಿ ಮಠದ ರೇಣುಕ ಮಹಾಂತ ಶಿವಾಚಾರ್ಯ ಶ್ರೀಗಳಿಂದ ಕಲಶಾರೋಹಣ, ನೂರೊಂದು ಎಡೆ, ಅಷ್ಟೋತ್ತರ ಶತ ಕುಂಕುಮಾರ್ಚನೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದ ನಂತರ ಅನ್ನಸಂತರ್ಪಣೆ ನಡೆಯಿತು. ಎಮ್ಮೆದೊಡ್ಡಿ, ಬೆಳ್ಳಿಗುತ್ತಿ, ಗೋಪಾಲಪುರ ಭಾಗದ ಭಕ್ತರು ಪಾಲ್ಗೊಂಡರು.