ಹೊರನಾಡಿನಲ್ಲಿ ವಿಜೃಂಭಣೆಯ ಲಕ್ಷ ದೀಪೋತ್ಸವ

c609ea14-3a6b-45fa-9b28-aaa89be493d4
Published on

ಕಳಸ: ಹೊರನಾಡಿನ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ, ಪುಷ್ಪಕ ರಥೋತ್ಸವ, ಪಲ್ಲಕ್ಕಿ ಉತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.

ಹೊರನಾಡು, ಕಳಸ, ಚಿಕ್ಕನಕುಡಿಗೆ, ಬಲಿಗೆ ಸೇರಿದಂತೆ ನೆರೆಹೊರೆಯ ಗ್ರಾಮಗಳಿಂದ ಸಾವಿರಾರು ಜನ ಬಂದು ಶ್ರೀ ಜಗನ್ಮಾತೆಗೆ ತಲೆಬಾಗಿ ಗಂದ ಪ್ರಸಾದ ಸ್ವೀಕರಿಸಿದರು. ಸ್ಥಳೀಯ ಪ್ರವಾಸಿ ತಾಣಗಳಿಗೆ ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ ಪ್ರವಾಸಿಗರೂ ದೀಪೋತ್ಸವದಲ್ಲಿ ಭಾಗವಹಿಸಿದ್ದರು.

ರಸ್ತೆಯ ಇಕ್ಕಲೆಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ದೇವಾಲಯವನ್ನು ವಿವಿಧ ಹೂವುಗಳಿಂದ ಅತ್ಯಂತ ಸುಂದರವಾಗಿ ಶೃಂಗರಿಸಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಸಾಲು ಸಾಲು ಲಕ್ಷಾಂತರ ಹಣತೆ ಹಚ್ಚಲಾಯಿತು. ಸಂಜೆ ಶ್ರೀಮಾತೆಗೆ ರಥೋತ್ಸವ ಸೇವೆ ನಡೆದ ನಂತರ ಲಕ್ಷ ದೀಪೋತ್ಸವ ನಡೆಯಿತು. ರಾತ್ರಿ10 ಗಂಟೆಗೆ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಟಿಸುತ್ತಾ, ಛತ್ರಿ ಚಾಮರ ಮಂಗಳವಾದ್ಯಗಳೊಂದಿಗೆ ಹೂವಿನ ಅಲಂಕಾರದೊಂದಿಗೆ ಸಿಂಗರಿಸಿ ಶ್ರೀದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಬರಲಾಯಿತು. ನಂತರ ಪುಷ್ಪಕ ರಥದಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಕೂರಿಸಿ ಆಂಜನೇಯ ದೇವಸ್ಥಾನದವರೆಗೆ ರಥೋತ್ಸವ ನಡೆಸಲಾಯಿತು.

ನೆರೆದ ಸಾವಿರಾರು ಭಕ್ತರು ದೇವರಿಗೆ ಲ, ಪುಷ್ಪಾ,ಅರ್ಚನೆ ಮಾಡಿದರು. ಬೆಳಗ್ಗೆ ಮಾಂಗಲ್ಯ ಮಂಟಪದಲ್ಲಿ ಶ್ರೀ ಮಾತೆಗೆ ಕೋಟಿ ಕುಂಕುಮಾರ್ಚನೆ,13ನೇ ವರ್ಷದ ರಕ್ತದಾನ ಶಿಬಿರ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಸಮೀಕ್ಷಾ.ಕೆ.ಎಂ ಮತ್ತು ತಂಡದವರು ಅಭಿಜ್ಞಾ ಸ್ಕೂಲ್ ಆ್ ಡ್ಯಾನ್ಸ್ ಹಾಸನ ಇವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net