ಶ್ರೀ ಅಂಬಾದೇವಿ ಕುಂಭೋತ್ಸವ ವಿಜೃಂಭಣೆ

snd ambadevi kumbotsava
ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ ಶ್ರೀ ಅಂಬಾದೇವಿ ಕುಂಭೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು. ತಹಸೀಲ್ದಾರ್ ಅರುಣ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಡಿವೈಎಸ್ಪಿ ಬಿ.ಎಸ್.ತಳವಾರ ಇತರರಿದ್ದರು.
Published on

ಸಿಂಧನೂರು: ತಾಲೂಕಿನ ಅಂಬಾಮಠದ ಸಿದ್ಧಪರ್ವತವಾಸಿ ಶ್ರೀ ಅಂಬಾದೇವಿ ಕುಂಭೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು.

ಹಳೇ ದೇವಸ್ಥಾನದಿಂದ ನಿರ್ಮಾಣ ಹಂತದ ದೇವಾಲಯ ಆವರಣ ವ್ಯಾಪ್ತಿಯಲ್ಲಿ ಸಾವಿರಾರು ಮಹಿಳೆಯರು ಕುಂಭ ಹೊತ್ತು ಪ್ರದಕ್ಷಿಣೆ ಹಾಕಿದರು. ಈ ಸಂದರ್ಭದಲ್ಲಿ ಭಕ್ತರಿಂದ ಜಯಘೋಷಗಳು ಮೊಳಗಿದವು. ಅಲ್ಲದೆ ನೆರೆದವರು ಪರಸ್ಪರ ಭಂಡಾರ ಎರಚುವ ಮೂಲಕ ಭಕ್ತಿ ಅರ್ಪಿಸಿದರು.

ತಾಲೂಕು ಸೇರಿದಂತೆ ವಿವಿಧ ಕಡೆಯಿಂದ ಬಂದಿದ್ದ ಭಕ್ತರು ಕುಂಭೋತ್ಸವ ಮುಗಿದ ನಂತರ ದೇವಿ ದರ್ಶನ ಪಡೆದರು. ತಹಸೀಲ್ದಾರ್ ಅರುಣ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಡಿವೈಎಸ್ಪಿ ಬಿ.ಎಸ್.ತಳವಾರ, ಸಿಪಿಐ ವೀರಾರೆಡ್ಡಿ, ಪಿಐ ದುರುಗಪ್ಪ ಡೊಳ್ಳಿನ್, ಗ್ರಾಮೀಣ ಪಿಎಸ್‌ಐ ಇಸಾಕ್, ಬಳಗಾನೂರು ಪಿಎಸ್‌ಐ ಯರಿಯಪ್ಪ, ಅಂಬಾದೇವಿ ದೇವಸ್ಥಾನದ ಅಧ್ಯಕ್ಷ ಎಂ.ರಂಗನಗೌಡ ಗೊರೇಬಾಳ, ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡರ, ದೇವಸ್ಥಾನ ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net