

ಮುಂಡರಗಿ: ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದ 40ನೇ ವಾರ್ಷಿಕೋತ್ಸವ ಪ್ರಯುಕ್ತ ಸೋಮವಾರ ಶ್ರೀ ಅಂಬಾಭವಾನಿ ದೇವಿ ಪಲ್ಲಕ್ಕಿ ಉತ್ಸವವು ಪ್ರಮುಖ ಬೀದಿಗಳಲ್ಲಿ ಶ್ರದ್ಧಾ ಭಕ್ತಿಯಿಂದ ಸಂಭ್ರಮದಿಂದ ನಡೆಯಿತು.
ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾಕಡಾರತಿ, ಹೋಮ, ಅಲಂಕಾರ, ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಪಲ್ಲಕ್ಕಿ ಉತ್ಸವ ದೇವಸ್ಥಾನದಿಂದ ಆರಂಭಗೊಂಡು ಬ್ರಾಹ್ಮಣರ ಓಣಿ, ಜೆ.ಟಿ. ಮಠ ರಸ್ತೆ, ಗಾಂಧಿ ಸರ್ಕಲ್, ಮುಖ್ಯ ಬಜಾರ್ ಮೂಲಕ ಪುನಃ ದೇವಸ್ಥಾನ ತಲುಪಿತು. ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿ ದರ್ಶನ ಪಡೆದರು.
ಅಶೋಕಸಾ ಶಿದ್ಲಿಂಗ್, ಬಾಲಚಂದ್ರಸಾ ಹಾದಿಮನಿ, ದೇವೇಂದ್ರಸಾ ಮಗಜಿ, ಗಣೇಶ ಮಗಜಿ, ರಮೇಶ ಪವಾರ, ಸ್ವಾಮಿಸಾ ಪವಾರ, ರಾಜು ಕೋಡೆ, ಭೀಮ್ಸೇನ್ ಬೌಚಗೇರೆ, ಕಾಶೀನಾಥ ಕಲಬುರ್ಗಿ, ಸುರೇಶ ಬಾರಿಗಿಡದ, ದಿಲೀಪ್ ಮೇಘರಾಜ್, ಪಾಂಡುರಂಗಸಾ ಬಸವ, ಉಮೇಶ ಶಿದ್ಲಿಂಗ್, ರವಿ ಶಿದ್ಲಿಂಗ್, ಶಂಕರ ಮಗಜಿ, ಉತ್ತಮ ಬಾಕಳೆ, ವಿಜಯ್ ಬಸವ, ಶ್ರೀಧರ ದಾನಿ, ಸುನೀಲ್ ಬೌಚಗೇರೆ, ವಿಶಾಲ್ ಮೇರವಾಡೆ, ಪುನೀತ್ ಪವಾರ, ಅಪ್ಪು ಖಟವಟೆ, ಪಾಂಡುರಂಗಸಾ ಕಬಾಡಿ, ಭರತ್ ಬದಿ, ಗಂಗಾಧರಸಾ ರಾಜೋಳಿ, ಗಜು ಕಬಾಡಿ, ಮುರಳಿ ಬಸವಾ, ರಾಜೇಶ ಪವಾರ, ಇತರರು ಇದ್ದರು.