ಶ್ರೀ ಆದಿಪರಾಶಕ್ತಿ ಅಮ್ಮನವರ ಜಾತ್ರೆ ಸಂಭ್ರಮ

25M.D.R.3
ಮದ್ದೂರು ತಾಲೂಕಿನ ಚಾಪುರದೊಡ್ಡಿ ಗ್ರಾಮದ ಮೂರನೇ ಮೈಲಿಯಲ್ಲಿ ರೂಪಿತವಾಗಿರುವ ಶ್ರೀ ಆದಿಪರಾಶಕ್ತಿ ಅಮ್ಮನವರ(ಬನ್ನಿ ಮರದಮ್ಮ) 93ನೇ ವರ್ಷದ ಜಾತ್ರೆ ಬುಧವಾರ ತಂಬಿಟ್ಟಿನ ಆರತಿ ಮೆರವಣಿಗೆ ನಡೆಯಿತು.
Published on

ಮದ್ದೂರು: ತಾಲೂಕಿನ ಚಾಪುರದೊಡ್ಡಿ ಗ್ರಾಮದ ಮೂರನೇ ಮೈಲಿಯಲ್ಲಿ ರೂಪಿತವಾಗಿರುವ ಶ್ರೀ ಆದಿಪರಾಶಕ್ತಿ ಅಮ್ಮನವರ(ಬನ್ನಿ ಮರದಮ್ಮ) 93ನೇ ವರ್ಷದ ಜಾತ್ರೆ ಮಹೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು.


ಬುಧವಾರ ಬೆಳಗಿನ ಜಾವ 4 ಗಂಟೆಯಿಂದ 7 ಗಂಟೆವರೆಗೆ ಗಿಂಡಿ ಉತ್ಸವ ಜತೆ ಗ್ರಾಮದೇವತೆಗಳ ಪೂಜಾ ಮೆರವಣಿಗೆ ಹಾಗೂ ಬಾಯಿಬೀಗ ನಡೆಯಿತು. ತಂಬಿಟ್ಟಿನ ಆರತಿ ಬೆಳಗಲಾಯಿತು.


ಮಂಗಳವಾರ ಶ್ರೀ ಆದಿ ಪರಾಶಕ್ತಿ ಅಮ್ಮನವರ ಪೂಜಾ ಕುಣಿತ ಮತ್ತು ಪೂಜಾ ಮೆರವಣಿಗೆ ನಡೆಯಿತು. ಬುಧವಾರ ಬೆಳಗ್ಗೆ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net