ಎಸ್‌ಆರ್‌ಇಎಸ್ ಕಾಲೇಜು ವಿದ್ಯಾರ್ಥಿಗಳು ಬ್ಲೂ

18MUDALGI1
Published on

ಮೂಡಲಗಿ: ಇಲ್ಲಿನ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಏಕವಲಯ ಪುರುಷ ಹಾಗೂ ಮಹಿಳಾಯೋಗಾಸನ ಸ್ಪರ್ಧೆಯಲ್ಲಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬ್ಲೂ ಆಗಿ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಪ್ರೇಮಾ ಕೊಡ್ಲಿಕಾರ, ಸೌಜನ್ಯ ತುಪ್ಪಾರೊಟ್ಟಿ, ಸುಷ್ಮಾ ಬಳೋಬಾಳ, ಸಂಜು ಘೋಡಗೇರಿ ಹಾಗೂ ಭರತ ರಾಮಗೌಡ ಸಾಂಪ್ರದಾಯಿಕ ಗುಂಪು ಯೋಗಾಸನದಲ್ಲಿ ಮತ್ತು ಗಂಗವ್ವ ಸನದಿ ಕಲಾತ್ಮಕ ವಿಭಾಗದಲ್ಲಿ ವಿಶ್ವವಿದ್ಯಾಲಯದ ಯೋಗಾಸನ ತಂಡದಿಂದ ಬ್ಲೂ ಆಗಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಯೋಗಾಸನ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯ ಪ್ರತಿನಿಧಿಸಲಿದ್ದಾರೆ.

ಸಂಸ್ಥೆ ಚೇರ್ಮನ್ ಬಸಗೌಡ ಪಾಟೀಲ, ಪ್ರಾಚಾರ್ಯ ಸುರೇಶ ಹನಗಂಡಿ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಕೆ.ಸೊಂಟನವರ, ಕ್ರೀಡಾ ಕಾರ್ಯದರ್ಶಿ ಬಿ.ಬಿ.ವಾಲಿ, ತರಬೇತಿದಾರ ಬಸವರಾಜ ಬಡವಣ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net