

ಶೃಂಗೇರಿ: ಶ್ರೀ ಶಾರದಾ ಪೀಠದ 36ನೇ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಗಳ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಅಂಗವಾಗಿ ಸುವರ್ಣ ಭಾರತೀ ಎಂಬ ಕಾರ್ಯಕ್ರಮದಡಿ ಶ್ರೀ ಶಂಕರ ಸ್ತೋತ್ರ ಸಮರ್ಪಣಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಶನಿವಾರ ಶ್ರೀಮಠದಲ್ಲಿ ನಡೆಯಿತು.
ಶ್ರೀಮಠದ ಅಧಿಕಾರಿ ಉಮೇಶ್ ಹರಿಹರ ಮಾತನಾಡಿ,ಶ್ರೀ ಶಂಕರಚಾರ್ಯರಿಂದ ರಚಿತವಾದ ಆಯ್ದ ಮೂರು ಸ್ತೋತ್ರದ ವಿಶೇಷ ಮಹಾ ಅಭಿಯಾನವನ್ನು ರಾಜ್ಯದಾದ್ಯಂತ ಕೈಗೊಳ್ಳಲಾಗಿದೆ. ಈ ಬಗ್ಗೆ ಸನಾತನ ಧರ್ಮದಡಿ ಬರುವ ಎಲ್ಲ ಪಂಗಡದ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗುತ್ತಿದೆ. ಮಹಾ ಅಭಿಯಾನ ಶೃಂಗೇರಿಯಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಭಕ್ತರು ಆಗಮಿಸಲಿದ್ದಾರೆ. ಮಹಾ ಅಭಿಯಾನದಲ್ಲಿ ಶ್ರೀಶಂಕರ ಸ್ತೋತ್ರ ಸಮರ್ಪಣೆ ನಡೆಯಲಿದೆ.
ಜಗದ್ಗುರುಗಳು 1974 ರಲ್ಲಿ ಸನ್ಯಾಸ ಸ್ವೀಕರಿಸಿ, 50 ವಸಂತ ಪೂರೈಸಿದ್ದಾರೆ. ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ಸುವರ್ಣ ಮಹೋತ್ಸವವನ್ನು ಸುವರ್ಣ ಭಾರತೀ ಹೆಸರಿನಲ್ಲಿ ವರ್ಷ ಪೂರ್ತಿ ಆಚರಿಸಲು ಸಂಕಲ್ಪ ಕೈಗೊಂಡಿದ್ದಾರೆ. ಇದರ ಅಂಗವಾಗಿ ನಡೆಯುತ್ತಿರುವ ಅನೇಕ ಕಾರ್ಯಕ್ರಮದಲ್ಲಿ ಶ್ರೀಶಂಕರ ಸ್ತೋತ್ರವೂ ಒಂದಾಗಿದೆ ಎಂದರು.
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್, ವಿವಿಧ ಸಮಾಜದ ಮುಖಂಡರಾದ ಕುಮಾರ ಸ್ವಾಮಿ ಶ್ರೇಷ್ಠಿ, ಬಿ.ಎಲ್.ರವಿಕುಮಾರ್, ಶೃಂಗೇರಿ ಸುಬ್ಬಣ್ಣ, ನಾಗೇಶ್ ಕಾಮತ್, ಮುರುಳಿಕೃಷ್ಣ, ವೆಂಕಟೇಶ ಪಂಡಿತ್, ಎ.ಎಂ.ಶ್ರೀಧರ ರಾವ್, ವಿನಾಯಕ ಶಾಸೀ, ಮಹಾಭಲ ಭೀಡೆ, ವೆಂಕಟೇಶ ಭಟ್, ಮಂಜುನಾಥ್, ಡಿ.ಸಿ.ಶಂಕರಪ್ಪ, ಮಂಜುನಾಥ ಶ್ರೇಷ್ಠಿ, ಶಚೇಂದ್ರ, ಕಾನಾರಂ ಪಟೇಲ್ ಇದ್ದರು.