ಸೋಮವಾರದಿಂದ ಶ್ರಾವಣ ಚಿಂತನ ಉಪನ್ಯಾಸ

shravana
ಸುದ್ದಿಗೋಷ್ಠಿಯಲ್ಲಿ ಉಮೇಶ್ ಆರಾಧ್ಯ ಮಾತನಾಡಿದರು, ಎಚ್.ಎಂ.ಕೊಟ್ರೇಶ್, ಕರಿಬಸವಯ್ಯ, ಕೆ.ಎಲ್.ವ್ಯೋಮಕೇಶ್ ಇದ್ದರು.
Published on

ಶಿವಮೊಗ್ಗ: ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್, ಬೆಕ್ಕಿನ ಕಲ್ಮಠದ ಗುರುಬಸವ ಅಧ್ಯಯನ ಪೀಠದಿಂದ ಆ.5ರಿಂದ ಸೆ.1ರವರೆಗೆ ಶ್ರಾವಣ ಚಿಂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಸಂಚಾಲಕ ಉಮೇಶ್ ಆರಾಧ್ಯ ತಿಳಿಸಿದರು.

ಶ್ರಾವಣ ಚಿಂತನ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ಶ್ರೀಮಠ ನಡೆಸಿಕೊಂಡು ಬರುತ್ತಿದೆ. ಮಠದಲ್ಲಿ ನಡೆಯುತ್ತಿದ್ದ ಶ್ರಾವಣ ಮಾಸದ ಕಾರ್ಯಕ್ರಮಗಳು ಇದೀಗ ನಗರದ ವಿವಿಧ ಬಡಾವಣೆಗಳಿಗೆ ವಿಸ್ತಾರಗೊಂಡಿವೆ. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಇದು ಜರುಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆ.5ರ ಸಂಜೆ 6.30ಕ್ಕೆ ಬೆಕ್ಕಿನ ಕಲ್ಮಠದಲ್ಲಿ ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಎನ್. ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮುಂತಾದವರು ಉಪಸ್ಥಿತರಿರುವರು. ಸೆ.1ರ ಸಂಜೆ 6ಕ್ಕೆ ಸಮಾರೋಪ ಕಾರ್ಯಕ್ರಮ ಜರುಗಲಿದೆ. ಪ್ರತಿದಿನ ಸೇವಾಕರ್ತರು ತಮ್ಮ ಬಡಾವಣೆಗಳಲ್ಲಿ ಶ್ರಾವಣ ಚಿಂತನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆ.19ರ ಸಂಜೆ 6ಕ್ಕೆ ಬೆಕ್ಕಿನ ಕಲ್ಮಠದಲ್ಲಿ 539ನೇ ಮಾಸಿಕ ಶಿವಾನುಭವಗೋಷ್ಠಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ಕೆ.ಎಲ್.ವ್ಯೋಮಕೇಶ್ ಆರಾಧ್ಯ, ಎಚ್.ಎಂ.ಕೊಟ್ರೇಶ್, ಕರಿಬಸವಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net