

ಹೆಬ್ರಿ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್ಆರ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಹಿಂದಿ ಭಾಷಣದಲ್ಲಿ ಅನನ್ಯಾ, ಭರತನಾಟ್ಯದಲ್ಲಿ ಅಭಿಜ್ಞಾ ಪ್ರಥಮ, ಇಂಗ್ಲಿಷ್ ಭಾಷಣದಲ್ಲಿ ಶ್ರಾವ್ಯ ದ್ವಿತೀಯ, ಕನ್ನಡ ಭಾಷಣದಲ್ಲಿ ಸಾಯಿ ಶ್ರುತಿ, ಕನ್ನಡ ಪ್ರಬಂಧದಲ್ಲಿ ಶರಣ್ಯಾ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಎಸ್ಆರ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ, ಕಾರ್ಯದರ್ಶಿ ಸ್ವಪ್ನಾ ಎನ್.ಶೆಟ್ಟಿ ಅಭಿನಂದಿಸಿದ್ದಾರೆ.