ಧೃಢ ಸಂಕಲ್ಪವಿದ್ದರೆ ಜಯ ನಿಶ್ಚಿತ: ಸಾಮಾಜಿಕ ಹೋರಾಟಗಾರ ಎಸ್.ಆರ್.ಹೀರೇಮಠ್

31 bidadi photo 5
Published on

ಬಿಡದಿ: ಟೊಯೋಟಾ ಕಿರ್ಲೇಸ್ಕರ್ ಮೋಟಾರ್ (ಟಿಕೆಎಂ) ಕಾರ್ವಿುಕ ಸಂಘದ 53ನೇ ದಿನದ ಹೋರಾಟದಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹೀರೇಮಠ್ ಭಾಗವಹಿಸಿ ನೈತಿಕ ಬೆಂಬಲ ನೀಡಿದರು.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಟಿಕೆಎಂ ಕಾರ್ವಿುಕ ಸಂಘಟನೆ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದ ಅವರು, ಗೌರವಯುತ ಬದುಕಿಗಾಗಿ ನಡೆಯುತ್ತಿರುವ ಟಿಕೆಎಂ ಕಾರ್ವಿುಕ ಸಂಘದ ಅಹಿಂಸಾತ್ಮಕ ಹೋರಾಟ ಎಲ್ಲ ರೀತಿಯಲ್ಲಿಯೂ ನ್ಯಾಯಯುತವಾಗಿದೆ ಎಂದು ಪ್ರಶಂಸಿದರು.

ಟಿಕೆಎಂ ಆಡಳಿತ ಮಂಡಳಿ ಕಾರ್ವಿುಕ ಸಂಘದ ಪದಾಧಿಕಾರಿಗಳೊಂದಿಗೆ ಮುಕ್ತವಾಗಿ ಮಾತನಾಡಿ ಪರಸ್ಪರ ಅನುಕೂಲವಾಗುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾರ್ವಿುಕರು ತಾಳ್ಮೆ ಕಳೆದುಕೊಳ್ಳದೆ ದೃಢಸಂಕಲ್ಪದಿಂದ ಇದ್ದರೆ ಖಂಡಿತ ಜಯ ಸಿಗಲಿದೆ ಎಂದು ಕಿವಿಮಾತು ಹೇಳಿದರು.

ಈ ವೇಳೆ ಕರ್ನಾಟಕ ರಾಷ್ಟ್ರ ಸಮಿತಿಯ ಮಲ್ಲಿಕಾರ್ಜುನ ಭಟ್ಟರಹಳ್ಳಿ, ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್, ಟಿಕೆಎಂ ಕಾರ್ವಿುಕ ಸಂಘಟನೆಯ ಅಧ್ಯಕ್ಷ ಚಕ್ಕೆರೆ ಪ್ರಸನ್ನಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net