ಮಕ್ಕಳ ಪ್ರಶಿಕ್ಷಣ ಶಿಬಿರ

IMG-20240413-WA0001.jpg
Published on

ಹುಬ್ಬಳ್ಳಿ: ಇಲ್ಲಿಯ ಯೋಗಸ್ಪರ್ಶ ಪ್ರತಿಷ್ಠಾನ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಬೇಸಿಗೆ ರಜೆ ನಿಮಿತ್ತ ಮಕ್ಕಳಿಗಾಗಿ ವಿವಿಧ ಬಡಾವಣೆಗಳಲ್ಲಿ ಮಕ್ಕಳ ವಸಂತ ಶಿಬಿರ ಏರ್ಪಡಿಸಲಾಗಿತ್ತು.

ಭಾಗವಹಿಸಿದ್ದ 110 ಮಕ್ಕಳನ್ನು ಉಚಿತ ವಸತಿ ಸಹಿತ ಪ್ರಶಿಕ್ಷಣ ಶಿಬಿರಕ್ಕೆ ಆಯ್ಕೆ ಮಾಡಿ, ಕೇಶ್ವಾಪುರದ ಸೇವಾ ಸದನಲ್ಲಿ ತರಬೇತಿ ನೀಡಲಾಯಿತು.

ಎಜಿಎಂ ಕಾಲೇಜಿನ ಸಹಾಯಕ ಉಪನ್ಯಾಸಕ ಡಾ. ರಜತ್ ಸವಣೂರ, ಅಮರಾವತಿ ಗಾಣಗಿ, ಸುಭಾಸ ಕೊಣ್ಣೂರ, ದೀಪಿಕಾ ಕೋನಾ, ಸ್ನೇಹಾ ಬಾಡಗಿ ಇತರರು ಪಾಲ್ಗೊಂಡಿದ್ದರು.

ಮಕ್ಕಳಿಗೆ ಯೋಗ, ಶಿಸ್ತು, ವಿವಿಧ ಆಟಗಳು, ವ್ಯಕ್ತಿತ್ವ ವಿಕಸನ, ಸಂಸ್ಕಾರಯುತ ಜೀವನ ಮುಂತಾದ ವಿದ್ಯೆಗಳನ್ನು ಕಲಿಸಲಾಗುತ್ತಿದೆ ಎಂದು ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಜೋಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net