ಬುದ್ಧಗಯಾವನ್ನು ಅನುಯಾಯಿಗಳಿಗೆ ಬಿಟ್ಟುಕೊಡಿ: ಸ್ಪೂರ್ತಿಧಾಮದ ಧಮ್ಮವೀರ ಬಂತೇಜಿ ಆಗ್ರಹ

Spurthidhama Dhammaveera Banteji press conference Mandya
Published on

ಮಂಡ್ಯ: ಬಿಹಾರದ ಬುದ್ಧಗಯಾ ಕೇಂದ್ರದ ಸಂಪೂರ್ಣ ಆಡಳಿತವನ್ನು ಮೂಲ ಬುದ್ಧ ಅನುಯಾಯಿಗಳಿಗೆ ಬಿಡಿಸಿಕೊಡಬೇಕು ಎಂದು ಬೆಂಗಳೂರಿನ ಸ್ಪೂರ್ತಿಧಾಮದ ಧಮ್ಮವೀರ ಬಂತೇಜಿ ಒತ್ತಾಯಿಸಿದರು.

ಈ ಕೇಂದ್ರವನ್ನು ಬೌದ್ಧರಿಗೆ ವಹಿಸಬೇಕು ಎಂಬ ಜಾಗೃತಿಯನ್ನು ರಾಷ್ಟ್ರಾದ್ಯಂತ ಮೂಡಿಸಲಾಗುತ್ತಿದೆ. ಕೂಡಲೇ ಸಂಬಂಧಿತರು ಕೂಡಲೇ ಬೌದ್ಧ ಧಮ್ಮ ಅನುಯಾಗಿಗಳಿಗೆ ಬುದ್ಧ ಗಯಾದ ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ವಹಿಸಿಕೊಡಬೇಕು. ಇದರೊಂದಿಗೆ ಈ ವಿಷಯವಾಗಿ ನಡೆಯುತ್ತಿರುವ ಸಂಘರ್ಷಗಳಿಗೆ ಪೂರ್ಣ ವಿರಾಮ ಹಾಕಲು ಮುಂದಾಗಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್ ಅಧ್ಯಕ್ಷ ಎಚ್.ಜಿ.ಗಂಗರಾಜು, ಬುದ್ಧ ಭಾರತ ಫೌಂಡೇಷನ್‌ನ ಅಧ್ಯಕ್ಷ ಜೆ.ರಾಮಯ್ಯ, ಅಮ್ಜದ್ ಪಾಷ, ಶ್ರೀನಿವಾಸ್, ಸಿದ್ದರಾಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net