ರಾಜ್ಯಮಟ್ಟದ ಈಜು ಸ್ಪರ್ಧೆ:ಬೆಳಗಾವಿ ಅಜಿತಕುಮಾರಗೆ ದ್ವಿತೀಯ ಸ್ಥಾನ

IMG-20250522-WA0029.jpg
Published on

ಬೆಳಗಾವಿ: ಶಿವಮೊಗ್ಗದಲ್ಲಿ ಈಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ, ಬೆಳಗಾವಿಯ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಅಜಿತಕುಮಾರ ಬಾಬು ಕಡಟ್ಟಿ ಅವರು 400 ಮಿಟರ್‌ ಫ್ರೀ ಸ್ಟೈಲ್‌ ಈಜು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಜಿಲ್ಲಾ ನ್ಯಾಯಾಲಯದಲ್ಲಿ ಬೇಲಿಫ್ ಆಗಿರುವ ಅಜಿತಕುಮಾರ ಜಿಲ್ಲೆಯನ್ನು ಪ್ರತಿನಿಧಿಸಿದ್ದರು. ಈ ಸಾಧನೆಗೆ ಬೆಳಗಾವಿ ಜಿಲ್ಲಾ ಬೆಲೀಫ್ ಮತ್ತು ಪ್ರೊಸೆಸ್ ಸರ್ವರ್ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ರಮೇಶ ಪಾಚ್ಚಪುರೆ ಮತ್ತು ಸಹೋದ್ಯೋಗಿಗಳಾದ ಶಿವಾನಂದ ನಾವಲಗಿ, ಶಿವಾಜಿ ಮೂರ್ಕಿಭಾವಿ, ಮಲ್ಲಿಕಾರ್ಜುನ ಕಾಗಿ, ವಿನಾಯಕ ಮತ್ತು ಸಂಗಮೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net