ಜಿಟಿಜಿಟಿ ಮಳೆಗೆ ಬೆಣಕಲ್ಲಿನಲ್ಲಿ ಮನೆ ಬಿದ್ದು ಹೋರಿ ಸಾವು

Rainfall Bull Death @ Benakal
ಕುಕನೂರು ತಾಲೂಕಿನ ಬೆಣಕಲ್ಲ ಗ್ರಾಮದ ಮಲ್ಲಪ್ಪ ಚನ್ನಬಸಪ್ಪ ಬಳಿಗಾರ ಎಂಬುವವರ ಮನೆ ಶುಕ್ರವಾರ ರಾತ್ರಿ ಮಳೆಗೆ ಬಿದ್ದು ಮನೆಯಲ್ಲಿದ್ದ ಹೋರಿ ಸಾವಿಗೀಡಾಗಿದೆ.
Published on

ಕುಕನೂರು: ಜಿಟಿಜಿಟಿ ಮಳೆಯಿಂದಾಗಿ ತಾಲೂಕಿನ ಬೆಣಕಲ್ಲ ಗ್ರಾಮದ ಮಲ್ಲಪ್ಪ ಚನ್ನಬಸಪ್ಪ ಬಳಿಗಾರ ಎಂಬುವವರ ಮನೆ ಶುಕ್ರವಾರ ರಾತ್ರಿ ಬಿದ್ದಿದ್ದು, ಮನೆಯಲ್ಲಿದ್ದ ಹೋರಿ ಸತ್ತಿದೆ. ಅಲ್ಲದೆ ಮಂಜುನಾಥ ಚನ್ನಬಸಪ್ಪ ಬಳಿಗಾರಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದ ನಾಗಮ್ಮ ಗುದ್ನೇಪ್ಪ ಉಳ್ಳಾಗಡ್ಡಿ, ಗುಡ್ಡದೀರಪ್ಪ ನೀಲಕಂಠಪ್ಪ ಸಜ್ಜನ ಎಂಬುವವರ ಮನೆ ಸಹ ಬಿದ್ದಿವೆ. ವಾಸವಿದ್ದ ಮನೆಗಳು ಬಿದ್ದ ಕಾರಣ ಗ್ರಾಮದ ದೇವಸ್ಥಾನಗಳಲ್ಲಿ ಆಶ್ರಯಕ್ಕಾಗಿ ಮೊರೆ ಹೋಗಿದ್ದಾರೆ. ಗ್ರಾಮಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಹಾರಕ್ಕಾಗಿ ಅನುಮೋದನೆಗೆ ವರದಿ ಕಳಿಸಲಾಗುವುದು ಎಂದು ತಿಳಿಸಿದ್ದಾರೆ.

ಮಳೆಗೆ ಜನಜೀವನ ಅಸ್ತವ್ಯಸ್ತ

ತಾವರಗೇರಾ: ತಡರಾತ್ರಿ ಎರಡು ಗಂಟೆಯಿಂದ ಸುರಿದ ಜಿಟಿಜಿಟಿ ಮಳೆಗೆ ಜನ ಜೀವನ ಅಸ್ತವ್ಯಸ್ತ ಗೊಂಡಿತು. ಶನಿವಾರ ವಾರದ ಸಂತೆ ಇದ್ದ ಕಾರಣ ತರಕಾರಿ ವ್ಯಾಪಾರಸ್ಥರು, ಬೇರೆ, ಬೇರೆ ದಿನಸಿ ಮಾರಾಟಗಾರರು ತೊಂದರೆ ಗೀಡಾದರು. ಪಟ್ಟಣ ವ್ಯಾಪ್ತಿಯಲ್ಲಿ 6 ಮನೆಗಳು ಕುಸಿದು ಬಿದ್ದಿವೆ. ಸಜ್ಜೆ, ನವಣೆ, ಮೆಕ್ಕೆ ಜೋಳ, ಈರುಳ್ಳಿ ಕಟಾವಿಗೆ ಬಂದಿದ್ದು, ಒಕ್ಕಲಿಗೆ ಮಳೆ ಅಡ್ಡಿಯಾಗಿದೆ. ಇದರಿಂದ ರೈತರು ತೀವ್ರ ಆತಂಕಕ್ಕೀಡಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net