ಬಾಲ್ಯದಲ್ಲಿಯೇ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು

P PURA SPORTS 18 (1)
Published on

ಪರಶುರಾಮಪುರ: ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್.ಮಾರುತೇಶ್ ಹೇಳಿದರು.

ಜಾಜೂರು ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪರಶುರಾಮಪುರ ವಲಯ 1ರ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ವರ್ಷಕ್ಕೊಮ್ಮೆ ನಡೆಯುವ ಕ್ರೀಡಾಕೂಟದಲ್ಲಿ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸುವಂತೆ ಶಿಕ್ಷಕರು ಹೆಚ್ಚು ಗಮನಹರಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಲೋಕಮ್ಮ ಸುರೇಶ ಮಾತನಾಡಿ, ಜಾಜೂರು ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ-ಪ್ರೌಢಶಾಲೆಗಳ ವಿದ್ಯಾರ್ಥಿಗಳ ಕ್ರೀಡಾಚಟುವಟಿಕೆಗೆ ಪೂರಕವಾಗಿ ಅಗತ್ಯ ಕ್ರೀಡಾಸಾಮಗ್ರಿಗಳನ್ನು ಗ್ರಾಪಂ ಅನುದಾನದಿಂದ ಕೊಡಿಸಲು ಸಾಮಾನ್ಯ ಸಭೆಯಲ್ಲಿ ಚರ್ಚೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಜಾಜೂರು ಸಹಿಪ್ರಾ ಶಾಲಾ ಸಮಿತಿ ಅಧ್ಯಕ್ಷ ಸಣ್ಣಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಗುರುಮೂರ್ತಿ, ಹೋಬಳಿಯ ಇಸಿಒ ರವಿಶಂಕರ ಮಾತನಾಡಿದರು.

ಕ್ರೀಡಾಧ್ವಜಾರೋಹಣ, ಕ್ರೀಡಾಜ್ಯೋತಿ ಸ್ವೀಕಾರ, ವಿದ್ಯಾರ್ಥಿಗಳ ಪಥಸಂಚಲನ ಗಮನಸೆಳೆಯಿತು. ವಿಜೇತರಿಗೆ ಬಹುಮಾನ ನೀಡಲಾಯಿತು.

ಗ್ರಾಪಂ ಉಪಾಧ್ಯಕ್ಷೆ ವೈ.ಪ್ರೇಮಕ್ಕ ಹನುಮಂತಯ್ಯ, ಸದಸ್ಯರಾದ ಜಯಲಕ್ಷ್ಮೀ, ಪ್ರೇಮಲತಾ, ರಂಗನಾಥ, ಗೋಪಾಲಪ್ಪ, ನರಸಿಂಹಪ್ಪ, ಮಾಜಿ ಸದಸ್ಯ ಮಹಾಂತಪ್ಪ, ಮಾರುತಿ, ಮುಖ್ಯಶಿಕ್ಷಕ ಕರಿಯಣ್ಣ, ಡಿ.ಮಹಾಲಿಂಗಪ್ಪ, ಸಣ್ಣಸೂರಮ್ಮ, ಈರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net