ಕ್ರೀಡೆಗಳಲ್ಲಿದೆ ಹಳ್ಳಿಗಳ ಸೊಗಡು

09 Arakera Photo 01
Published on

ಅರಕೇರಾ: ಗ್ರಾಮೀಣ ಕ್ರೀಡೆಗಳ ಆಯೋಜಿಸುವ ಮೂಲಕ ಹಳ್ಳಿ ಸೊಗಡು ಎತ್ತಿ ಹಿಡಿಯಬೇಕು ಎಂದು ಕಲ್ಪವೃಕ್ಷ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಬಸವರಾಜ ಪೂಜಾರಿ ಹೇಳಿದರು.

ಬಿ.ಗಣೇಕಲ್‌ನಲ್ಲಿ ಅವರಾತ್ರಿ ಅಮಾವಾಸ್ಯೆ ಪ್ರಯುಕ್ತ ಎತ್ತುಗಳಿಂದ ಭಾರದ ಕಲ್ಲು ಎಳೆವ ಸ್ಪರ್ಧೆಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಸ್ಮಾರ್ಟ್ ಯುಗದಲ್ಲಿ ಪಾರಂಪರಿಕ ಆಚರಣೆಗಳನ್ನು ಮರೆಯುತ್ತಿದ್ದೇವೆ. ಹಳ್ಳಿಗಳಲ್ಲಿ ಸಂಸ್ಕೃತಿ ನಾಶವಾದರೆ ದೇಶ ಮುನ್ನಡೆಸುವುದು ಕಷ್ಟದ ಸಂಗತಿ. ಹಳ್ಳಿಗಳ ಸೊಗಡು ವೈಭವದಿಂದ ಆಚರಣೆ ಮಾಡುವಂತಾಗಲಿ ಎಂದರು. ಪ್ರಮುಖರಾದ ಮುದುಕಣ್ಣ ಪೂಜಾರಿ, ರಂಗಣ್ಣ ಪೂಜಾರಿ, ಧರ್ಮಣ್ಣ ಪೂಜಾರಿ, ಮಲ್ಲಯ್ಯ ಪೂಜಾರಿ, ರಾಚಣ್ಣ ಅಬಕಾರಿ, ಲಿಂಗರಾಜಗೌಡ, ಮಹೇಶ ಗೌಡ ಸಿದ್ದಣ್ಣ ದೊಂಡಂಬಳಿ, ಶಾಂತಪ್ಪ ಸಾಹುಕಾರ, ಸಿದ್ದಪ್ಪ ದೊರೆ, ಬಾಲಯ್ಯ ದೊರೆ, ಬಸವರಾಜ ದಳವಾಯಿ, ಮೇಘರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net