ರಾಜ್ಯಮಟ್ಟದ ಕ್ರೀಡಾಕೂಟ: ದ.ಕ. ಜಿಲ್ಲೆಗೆ ಸಮಗ್ರ ಪ್ರಶಸ್ತಿ

IMG-20231103-WA0007
Published on

ಉಡುಪಿ: ಅಜ್ಜರಕಾಡು ಕ್ರೀಡಾಂಗಣದಲ್ಲಿ 3 ದಿನ ನಡೆದ 14ರ ವಯೋಮಾನದ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದ. ಕ. ಜಿಲ್ಲೆ ಸಮಗ್ರ ಪ್ರಶಸ್ತಿ ಪಡೆದಿದೆ. ಬಾಲಕರ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ, ಬಾಲಕೀಯರ ವಿಭಾಗದಲ್ಲಿ ಬೆಂಗಳೂರು ವಿದ್ಯಾನಗರ ಸ್ಪೋರ್ಟ್ಸ್​ ಸ್ಕೂಲ್​ ಚಾಂಪಿಯನ್​ ಗಳಿಸಿದೆ.

ಕ್ರೀಡಾಕೂಟದಲ್ಲಿ ದ.ಕ. ಜಿಲ್ಲೆಯ ಕ್ರೀಡಾಪಟುಗಳು 4 ಚಿನ್ನದ ಪದಕ, 2 ಬೆಳ್ಳಿ, 2 ಕಂಚಿನ ಪದಕ ಪಡೆದುಕೊಂಡು ಸಮಗ್ರ ಪ್ರಶಸ್ತಿ ಭಾಜನರಾಗಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿ ರಾಯಚೂರಿನ ದುರ್ಗೇಶ್​ ಮತ್ತು ಬೆಳಗಾವಿಯ ಗೌರಿ ಪೂಜಾರಿ ಬಹುಮಾನ ಪಡೆದರು.

ಸಮಾರೋಪ ಸಮಾರಂಭದಲ್ಲಿ ಡಿಡಿಪಿಐ ಗಣಪತಿ ಕೆ. ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯಕುಮಾರ್​ ಸೊರಕೆ, ತೋಟದಮನೆ ಶ್ರೀ ಶಿರಡಿ ಸಾಯಿಬಾಬ ಮಂದಿರದ ಮೊಕ್ತೇಸರ ದಿವಾಕರ್​ ಶೆಟ್ಟಿ, ಕನ್ನರ್ಪಾಡಿ ಶ್ರೀ ಜಯದುರ್ಗಾ ದೇವಸ್ಥಾನದ ಅಡಳಿತ ಮಂಡಳಿ ಅಧ್ಯಕ್ಷ ರಾವೇಂದ್ರ ಭಟ್​, ಉದ್ಯಮಿ ಪುರುಷೊತ್ತಮ್​ ಶೆಟ್ಟಿ, ಮುನಿಯಾಲು ಉದಯಕುಮಾರ್​ ಶೆಟ್ಟಿ, ಜಯಪ್ರಕಾಶ್​ ಕೆದ್ಲಾಯ, ಸುಧೀರ್​ಕುಮಾರ್​ ಶೆಟ್ಟಿ, ಅನಿಲ್​ ಲೋಬೊ, ರಮೇಶ್​ ಕಾಂಚನ್​ ಮತ್ತು ಸೈಂಟ್​ ಸಿಸಿಲಿ ಸಮೂಹ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ತೆರೇಸಾ ಜ್ಯೋತಿ, ಸೈಂಟ್​ ಸಿಸಿಲಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪ್ರೀತಿ ಜೆ. ಕ್ರಾಸ್ತಾ, ದೈಹಿಕ ಶಿಕ್ಷಣ ಶಿಕ್ಷಕರ ಸಂದ ಅಧ್ಯಕ್ಷ ವಿಜಯಕುಮಾರ್​ ಶೆಟ್ಟಿ, ತಾಲೂಕು ಅಧ್ಯಕ್ಷ ಚಂದ್ರಶೇಖರ್​ ಸುವರ್ಣ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ನಗರಸಭೆ ಪೌರಾಯುಕ್ತ ರಾಯಪ್ಪ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್​ಕುಮಾರ್​ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net