ಹದಿಹರೆಯದ ಸಮಸ್ಯೆಗೆ ಕ್ರೀಡೆ ಪರಿಹಾರ

club
ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಲೇಡೀಸ್ ಕ್ಲಬನ್ನು ಡಾ.ಶ್ರುತಿ ಬಲ್ಲಾಳ್ ಉದ್ಘಾಟಿಸಿದರು. ಸಪ್ನಾ ಶೆಟ್ಟಿ, ಭಗವತಿ ಮೊದಲಾದವರಿದ್ದರು
Published on

ಹೆಬ್ರಿ: ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯ ಕಾಯ್ದುಕೊಳ್ಳುವುದು ಬಹಳ ಅಗತ್ಯ. ಇದಕ್ಕಾಗಿ ಸೂಕ್ತ ಆಹಾರ ಕ್ರಮ, ಜೀವನ ಶೈಲಿ ಅನುಸರಿಸುವುದು ಅತೀ ಮುಖ್ಯ. ಹದಿಹರೆಯದ ಸಮಸ್ಯೆ ಪರಿಹರಿಸಿಕೊಳ್ಳಲು ಯೋಗ, ನಿಯಮಿತ ಕ್ರೀಡೆ ಸಹಕಾರಿ ಎಂದು ಮಧುಮೇಹ ತಜ್ಞೆ ಡಾ.ಶ್ರುತಿ ಬಲ್ಲಾಳ್ ಹೇಳಿದರು.

ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಲೇಡೀಸ್ ಕ್ಲಬ್ ಉದ್ಘಾಟಿಸಿ, ಹದಿಹರೆಯದ ಸಮಸ್ಯೆ ಮತ್ತು ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.
ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಆರ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಭಗವತಿ ಉಪಸ್ಥಿತರಿದ್ದರು. ವನಿತಾ ತೋಳಾರ್ ಸ್ವಾಗತಿಸಿದರು. ಶುಭಲಕ್ಷ್ಮೀ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net