ಫ್ರೆಂಡ್ಸ್ ಗೌಡಳ್ಳಿ, ಭಾಗ್ಯಾ ತಂಡ ಪಾರಮ್ಯ

031022 Ballari Drive to the new-light football tournament
ಬಳ್ಳಾರಿಯ ಡಾ.ರಾಜಕುಮಾರ್ ರಸ್ತೆಯ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿ ಭಾನುವಾರ ಸಂಜೆ ಹೊನಲು ಬೆಳಕಿನ ಫುಟ್ಬಾಲ್ ಲೀಗ್ ಪಂದ್ಯಾವಳಿ ಜರುಗಿತು.
Published on

ಸೋಮವಾರಪೇಟೆ : ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿಯು ಜಾತ್ರೋತ್ಸವದ ಅಂಗವಾಗಿ

ಹಮ್ಮಿಕೊಂಡಿದ್ದ ಕ್ರೀಡಕೂಟದ ಮುಕ್ತ ಫುಟ್ಬಾಲ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಎಫ್‌ಸಿ ಗೌಡಳ್ಳಿ ತಂಡ ಪ್ರಥಮ, ಟೀಮ್ ಶುಂಠಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಭಾಗ್ಯಾ ಫ್ರೆಂಡ್ಸ್ ಶಾಂತಳ್ಳಿ ತಂಡ ಪಾರಮ್ಯ ಮೆರೆಯಿತು. ತೀವ್ರ ಸೆಣೆಸಾಟ ನಡೆಸಿದ ಪಿವೈಸಿ ಕೂಗೂರು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ವಿಜೇತ ತಂಡಗಳು ನಗದು ಹಾಗು ಆಕರ್ಷಕ ಟ್ರೋಫಿ ಪಡೆದುಕೊಂಡರು.

ಫುಟ್ಭಾಲ್ ರೋಚಕ ಫೈನಲ್ ಪಂದ್ಯಾಟದಲ್ಲಿ 1-0 ಗೋಲಿನ ಮೂಲಕ ಎಫ್‌ಸಿ ಗೌಡಳ್ಳಿ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮೊದಲ ಸೆಮಿಫೈನಲ್‌ನಲ್ಲಿ ಎಫ್‌ಸಿ ಗೌಡಳ್ಳಿ, ಪ್ಲಾಂಟರ್ಸ್‌ ಕ್ಲಬ್ ಬೀಟಿಕಟ್ಟೆ ತಂಡದ ವಿರುದ್ಧ 4-2 ಗೋಲುಗಳಿಂದ ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತ್ತು. 2 ನೇ ಸೆಮಿಫೈನಲ್‌ನಲ್ಲಿ ಟೀಮ್ ಶುಂಠಿ ತಂಡ, ಹಾನಗಲ್ ಬಾಯ್ಸ ತಂಡದ ವಿರುದ್ಧ 4-3 ಗೋಲುಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತ್ತು.

ಬಹುಮಾನ ವಿತರಣೆ:

ಶಾಸಕ ಡಾ. ಮಂಥರ್ ಗೌಡ ಸೆಮಿಫೈನಲ್ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಗೂ ಕೊಡಗಿನ ಜನರಿಗೂ ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬರ ಶರೀರದಲ್ಲಿ ಕೀಡಾ ಉತ್ಸಾಹದ ರಕ್ತವೇ ಹರಿಯುತ್ತಿದೆ ಎಂದರು. ಕೊಡಗಿನ ಪುರುಷರು, ಮಕ್ಕಳು, ಮಹಿಳೆಯರು ಬಾಲ್ಯದಿಂದಲೂ ಒಂದಿಲ್ಲೊಂದು ಕ್ರೀಡೆಯಲ್ಲಿ ಪಾಲ್ಗೊಂಡಿರುತ್ತಾರೆ. ಮಕ್ಕಳು ಓದಿನೊಂದಿಗೆ ಕ್ರೀಡೆಯಲ್ಲೂ ಭಾಗವಹಿಸಲು ಪಾಲಕರು ಇನ್ನೂ ಹೆಚ್ಚು ಪ್ರೋತ್ಸಾಹ ನೀಡಬೇಕು. ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಲಭಿಸುತ್ತದೆ. ಅರೋಗ್ಯವಿದ್ದರೆ ಮಾತ್ರ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು

ಪ್ರತಿಭೆ ಗುರುತಿಸಿ: ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕೀಡಾಕೂಟಗಳು ನಡೆಯಬೇಕು. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಬೆಂಬಲಿಸಬೇಕು ಎಂದು ಡಾ. ಮಂಥರ್ ಗೌಡ ಹೇಳಿದರು. ನವ ದುರ್ಗಾಪರಮೇಶ್ವರಿ ದೇವಾಲಯದ ಜಾತ್ರೋತ್ಸವದಲ್ಲಿ ಕೀಡಾಕೂಟಗಳನ್ನು ಹಮ್ಮಿಕೊಂಡು ಗ್ರಾಮೀಣ ಜನರಿಗೆ ರಂಜನೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಗಣ್ಯರಿಗೆ ಸನ್ಮಾನ: ಇದೇ ಸಂದರ್ಭ ಭೂ ಮತ್ತು ಗಣಿ ವಿಜ್ಞಾನಿ ರೋಜಾ ಧರ್ಮಪ್ಪ , ಪಿಡಿಒ ಲಿಖಿತಾ ಅವರನ್ನು ಸನ್ಮಾನಿಸಲಾಯಿತು.

ತೀರ್ಪುಗಾರರಾಗಿ ಗೌಡಳ್ಳಿ ಪ್ರವೀಣ್, ವಿನೋದ್, ಕರುಣನ್, ಅವಿನಾಶ್, ಸಂಜೀವ್, ಮಿಲ್ಡಿನ್ ಕಾರ್ಯ ನಿರ್ವಹಿಸಿದರು. ಸಕಲೇಶಪುರ ಶಾಸಕ ಮಂಜುನಾಥ್ ಬಹುಮಾನ ವಿತರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಬಿ.ಗುರುಪ್ರಸಾದ್, ಉಪಾಧ್ಯಕ್ಷ ಸುಮಂತ್ ಕೂಗೂರು, ಪ್ರಮುಖರಾದ ಎಸ್.ಬಿ.ಭರತ್ ಕುಮಾರ್, ಜಿ.ಎಂ. ಹೂವಯ್ಯ, ಜಿ.ಎ. ಮಹೇಶ್, ಎಚ್.ಎನ್.ಚಂದ್ರಶೇಖರ್, ಟಿ.ಎಸ್.ರಾಮಚಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net