ಉತ್ತಮ ಕ್ರೀಡಾಶಾಲೆ ಪ್ರಶಸ್ತಿ

IMG-20230905-WA0009-1.jpg
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ತಾಲೂಕಿನ ಉತ್ತಮ ಕ್ರೀಡಾ ಶಾಲೆ ಪ್ರಶಸ್ತಿ ಲಭಿಸಿದೆ.

ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಶಾಲೆಯ ಪ್ರಧಾನ ಗುರು ಬಿ.ವಿ. ಬಮ್ಮನವಾಡಿ, ದೈಹಿಕ ಶಿಕ್ಷಣ ಶಿಕ್ಷಕ ವೈ.ಎಸ್. ಕಮತರ ಹಾಗೂ ಇತರ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಶಿಕ್ಷಕರಾದ ಸಿ.ವಿ. ಬಟಗುರ್ಕಿ, ಬಿ.ಬಿ. ಸುಳ್ಳದ, ಎಸ್.ವಿ. ಪರನ್ನವರ, ಎನ್.ಜಿ. ಗಜನ್ನವರ, ಎಸ್.ಎಂ. ಅಸುಂಡಿ, ವಾಣಿ ಪತಂಗೆ, ಪುಷ್ಪಾ ಯಡ್ರಾವಿ, ಆರ್.ಎ. ಹೊಸಮನಿ, ಶಿಲ್ಪಾ ಆರ್. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net