ಇಸಾಮುದ್ರ ಗೊಲ್ಲರಹಟ್ಟಿ ಶಾಲೆಗೆ ಸಮಗ್ರ ಪ್ರಶಸ್ತಿ

dj brm sports
Published on

ಭರಮಸಾಗರ: ಯಳಗೋಡಿನಲ್ಲಿ ಗುರುವಾರ ಮುಕ್ತಾಯವಾದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಇಸಾಮುದ್ರ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಗ್ರ ಪ್ರಶಸ್ತಿ ಬಾಚಿಕೊಂಡಿದೆ.

ಬಾಲಕರ ವಿಭಾಗದ ಖೋಖೋ ಸ್ಪರ್ಧೆಯಲ್ಲಿ ಪ್ರಥಮ, ಬಾಲಕಿಯರ ವಿಭಾಗದಲ್ಲಿ ದ್ವಿತೀಯ, 600 ಮೀ.ಓಟದಲ್ಲಿ ಆರ್.ಪ್ರಶಾಂತ್

ಬಿ.ದಿವ್ಯಾಶ್ರೀ ಪ್ರಥಮ, 400 ಮೀ.ಓಟದಲ್ಲಿ ಎಂ.ಸಾಗರ್, ಬಾಲಕಿಯರ ವಿಭಾಗದ 200 ಮೀ. ಮತ್ತು 100ಮೀ., 800ಮೀ.ಓಟದ ಸ್ಪರ್ಧೆಯಲ್ಲಿ

ಬಿ.ಅಪೂರ್ವ ಪ್ರಥಮ, ಬಾಲಕರ ವಿಭಾಗದ 100 ಮೀ.ಓಟದಲ್ಲಿ ಬಿ.ರಾಹುಲ್ ದ್ವಿತೀಯ, ಎತ್ತರ ಜಿಗಿತದಲ್ಲಿ ಬಿ.ದಿಕ್ಷೀತಾ ದ್ವಿತೀಯ, ಎಸ್.ಗಣೇಶ್ ತೃತೀಯ, 4/100 ಮೀ.ರಿಲೇ ಸ್ಪರ್ಧೆಯಲ್ಲಿ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆಯಿತು.

ಹೋಬಳಿ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಇಸಾಮುದ್ರ ಶಾಲೆ ಮಕ್ಕಳು ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net