ಅಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಸಾಧನೆ

SPORTS
ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಹಿರೇವಂಕಲಕುಂಟಾ-ತಾಳಕೇರಿ ಹಿರಿಯ ಪ್ರಾಥಮಿಕ ಶಾಲೆಗಳ ಅಂತರ್ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾಳಕೇರಿ ಸಹಿಪ್ರಾ ಶಾಲೆಯ ಬಾಲಕರ ಖೋಖೋ ತಂಡ ಮೊದಲ ಸ್ಥಾನ ಪಡೆಯಿತು.
Published on

ಯಲಬುರ್ಗಾ: ಮಾಟಲದಿನ್ನಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಹಿರೇವಂಕಲಕುಂಟಾ-ತಾಳಕೇರಿ ಹಿರಿಯ ಪ್ರಾಥಮಿಕ ಶಾಲೆಗಳ ಅಂತರ ವಲಯ ಮಟ್ಟದ ಕ್ರೀಡಾಕೂಟದದಲ್ಲಿ ಪ್ರಥಮ, ವೈಯಕ್ತಿಕ ಆಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

ಬಾಲಕಿಯರ ವಿಭಾಗ: ಹಿರೇವಂಕಲಕುಂಟಾದ ಸಮಾಹಿಪ್ರಾ ಶಾಲೆಯ ದೀಪಾ 100 ಮೀಟರ್ ಓಟದಲ್ಲಿ (ಪ್ರಥಮ ಸ್ಥಾನ), ತಾಳಕೇರಿ ಸಹಿಪ್ರಾ ಶಾಲೆಯ ವಿಜಯಲಕ್ಷ್ಮೀ (ದ್ವಿ), 200 ಮೀ. ಓಟದಲ್ಲಿ ಗಾಣಧಾಳ ಶಾಲೆಯ ಅನುಶ್ರೀ (ಪ್ರ), ಬೋದೂರು ಶಾಲೆಯ ರಾಜೇಶ್ವರಿ (ದ್ವಿ). 400 ಮೀ. ಓಟದಲ್ಲಿ ಗಾಣಧಾಳ ಶಾಲೆಯ ಅನಿತಾ (ಪ್ರ), ತಾಳಕೇರಿ ಶಾಲೆಯ ಜಯಶ್ರೀ (ದ್ವಿ). 600 ಮೀ. ಓಟದಲ್ಲಿ ಹಿರೇವಂಕಲಕುಂಟಾ ಎಂಡಿಆರ್‌ಎಸ್ ಶಾಲೆಯ ಶ್ರೀದೇವಿ (ಪ್ರ), ಅನ್ನಪೂರ್ಣಾ (ದ್ವಿ), 80 ಮೀ. ಹರ್ಡಲ್ಸ್‌ನಲ್ಲಿ ತಾಳಕೇರಿ ಎಂಡಿಆರ್‌ಎಸ್‌ನ ಪವಿತ್ರಾ (ಪ್ರ), ಹಿರೇವಂಕಲಕುಂಟಾ ಎಂಡಿಆರ್‌ಎಸ್‌ನ ಯಲ್ಲಮ್ಮ (ದ್ವಿ).

ಬಾಲಕರ ವಿಭಾಗ: 100 ಮೀ. ಓಟದಲ್ಲಿ ಎಚ್‌ವಿಕೆ ಮುರಾರ್ಜಿ ಶಾಲೆಯ ಪ್ರಮೋದ (ಪ್ರಥಮ), ಪರಶುರಾಮ (ದ್ವಿ), 200 ಮೀ. ಓಟದಲ್ಲಿ ಎಚ್‌ವಿಕೆ ಮುರಾರ್ಜಿ ಶಾಲೆಯ ಪ್ರಮೋದ (ಪ್ರ), ಮಾಟಲದಿನ್ನಿ ಶಾಲೆಯ ಅಯಾಜ್‌ಅಲಿ (ದ್ವಿ). 400 ಮೀ. ಓಟದಲ್ಲಿ ಎಚ್‌ವಿಕೆ ಮುರಾರ್ಜಿ ಶಾಲೆಯ ದೇವರಾಜ (ಪ್ರ), ತಾಳಕೇರಿ ಮುರಾರ್ಜಿ ಶಾಲೆಯ ಮರಿಸ್ವಾಮಿ (ದ್ವಿ), 600 ಮೀ. ಓಟದಲ್ಲಿ ತಾಳಕೇರಿ ಮುರಾರ್ಜಿ ಶಾಲೆಯ ವಿಕಾಸ್ (ಪ್ರ), ಸಹಿಪ್ರಾ ಶಾಲೆಯ ಅಭಿಷೀಕ (ದ್ವಿ), 80 ಮೀ. ಹರ್ಡಲ್ಸ್‌ನಲ್ಲಿ ಎಚ್‌ವಿಕೆ ಮುರಾರ್ಜಿ ಶಾಲೆಯ ಪ್ರಮೋದ (ಪ್ರ), ತಾಳಕೇರಿ ಮುರಾರ್ಜಿ ಶಾಲೆಯ ಮಾರುತೇಶ (ದ್ವಿ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net