

ಚನ್ನಗಿರಿ: ಹರಿಯಾಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟಮಟ್ಟದ ಕ್ರೀಡಾಕೂಟದಲ್ಲಿ ದೇವರಹಳ್ಳಿಯ ಜವಾಹರ ನವೋದಯ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಎಚ್.ಡಿ.ಚಿನ್ಮಯಿ ಪ್ರಥಮ ಸ್ಥಾನ ಪಡೆದು ಉತ್ತಮ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾಳೆ.
ರಾಷ್ಟ್ರಮಟ್ಟದ ಹ್ಯಾಂಡ್‌ಬಾಲ್ ಸ್ಪರ್ಧೆಯಲ್ಲಿ ಎಸ್.ವಸುಂಧರಾ, ಎಂ.ಜಿ. ಸಂಜನಾ, ಎಸ್.ಲಕ್ಷಿ ್ಮ, ಕೆ.ಹರ್ಷಿತಾ ಎಸ್‌ಜಿಎಜಿಎಫ್ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಚಾರ್ಯ ಎ.ವಿಜಯ, ದೈಹಿಕ ಶಿಕ್ಷಕಿ ಬಿ.ಎಂ.ತ್ರಿವೇಣಿ, ಕೆ.ರಶ್ಮಿ ಹರ್ಷ ವ್ಯಕ್ತಪಡಿಸಿದ್ದಾರೆ.