ಮನಗುಂಡಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳ ಕ್ರೀಡಾ ಸಾಧನೆ

21 Dwd 7
Published on

ಧಾರವಾಡ: ತಾಲೂಕಿನ ಮನಗುಂಡಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಇತ್ತೀಚೆಗೆ ನಗರದ ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಡೆದ ನಿಗದಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮÁಡಿದ್ದಾರೆ.
ಆಕಾಶ ದುಪ್ಲೂಪೂರ ಗುಂಡು, ಚಕ್ರ, ಹ್ಯಾಮರ್ ಎಸತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಸ್ಪರ್ಧೆಗಳ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾನೆ. ಪ್ರಕಾಶ ಉಡಚಪ್ಪನವರ ೧೦೦ ಮೀಟರ್? ಓಟ, ವಿನಾಯಕ ಗೋರೋಜನವರ ೧,೦೦೦ ಮೀಟರ್ ಓಟ, ಜಯಶ್ರೀ ಸಿಂಗಾಡಿ ಉದ್ದಜಿಗಿತ, ದೀಪಿಕಾ ಮುಶೆಲ್ಲನವರ ೩ ಕಿ.ಮೀ. ನಡಿಗೆ, ಸೌಂದರ್ಯ ಅವರೊಳ್ಳಿ ೮೦೦ ಮೀಟರ್ ಓಟದÀಲ್ಲಿ ಪ್ರಥಮ, ಬಸವರಾಜ ಗೋಲಣ್ಣವರ ಚಕ್ರಎಸೆತ, ಚಂದ್ರಶೇಖರ ಕಳ್ಳಿಮನಿ ೫ ಕಿ.ಮೀ. ನಡಿಗೆ, ಬಸವರಾಜ ಗಂಡೂಡಿ ೮೦೦ ಮೀ. ಓಟ, ಸೌಂದರ್ಯ ಅವರೊಳ್ಳಿ ಉದ್ದಜಿಗಿತ, ವಿನೋದಾ ಕಳ್ಳಿಮನಿ ೧,೫೦೦ ಮೀ. ಓಟ, ಸುಕನ್ಯಾ ಬೆಳ್ಳಿಗಟ್ಟಿ ಎತ್ತರ ಜಿಗಿತ, ಗಂಗಮ್ಮ ಮ. ಗೋರೋಜನವರ ಹ್ಯಾಮರ್ ಎಸೆತ, ಪ್ರಿಯÁಂಕ ಹುತ್ತಕ್ಕನವರ ೩ ಕಿ.ಮೀ. ನಡಿಗೆ, ಈರಮ್ಮ ಚಿವುಟಗುಂಡಿ ೧೦೦ ಮೀ. ಓಟ, ಲಕ್ಷಿ÷್ಮÃ ಮೇಟಿ ೮೦೦ ಮೀ. ಓಟ, ಗಂಗಮ್ಮ ಗೋರೋಜನವರ ಭಲ್ಲೆ ಎಸೆತ ಸ್ಪರ್ಧೆಗಳಲ್ಲಿ ದ್ವಿತೀಯ, ಗಣೇಶ ಕಣಕಪ್ಪನವರ ಎತ್ತರ ಜಿಗಿತ, ಮೈಲಾರಿ ಕುರುಬರ ತ್ರಿವಿಧ ಜಿಗಿತ, ದೀಪಿಕಾ ಮುಶೆಲ್ಲನವರ ೩,೦೦೦ ಮೀ. ಓಟ, ಕೀರ್ತಿ ಹಿರೇಮಠ ೨೦೦ ಮೀ ಓಟ. ಪೂಜಾ ಗುಂಡಗೋವಿ ಚಕ್ರ ಎಸೆತ, ಈರಮ್ಮ ಚಿವುಟಗುಂಡಿ ೪೦೦ ಮೀ. ಸೌಂದರ್ಯ ಅವರೊಳ್ಳಿ ತ್ರಿವಿಧ ಜಿಗಿತ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಶಾಲಾ ಬಾಲಕಿಯರ ತಂಡಗಳು ರಿಲೇ, ಖೋಖೋದಲ್ಲಿ ಪ್ರಥಮ, ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿವೆ. ಬಾಲಕರ ತಂಡಗಳು ರಿಲೇ, ವಾಲಿಬಾಲ್‌ನಲ್ಲಿ ಪ್ರಥಮ, ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿವೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಗೊರವರ ಮÁರ್ಗದರ್ಶನ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net