ಹೊಸ ಅವಕಾಶಕ್ಕೆ ಕ್ರೀಡೆ ಪ್ರೇರಣೆ, ಶಾಸಕ ಡಾ. ಚಂದ್ರು ಲಮಾಣಿ ಅಭಿಪ್ರಾಯ

23 SHT 01 Sports
Published on


ಶಿರಹಟ್ಟಿ: ವಿವಿಧ ಪಾತ್ರ ನಿರ್ವಿುಸುವ ದೃಢವಾದ ಮತ್ತು ವೈವಿಧ್ಯಮಯವಾದ ಅವಕಾಶಗಳನ್ನು ನೀಡಲು ಕ್ರೀಡೆಗಳು ಪ್ರೇರಣೆ ನೀಡುತ್ತವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.


ಪಟ್ಟಣದ ಎಸ್.ಎಂ. ಡಬಾಲಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.


ದೈಹಿಕ ಶಿಕ್ಷಣ ಮತ್ತು ಮನರಂಜನಾತ್ಮಕ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗಲು ನೆರವಾಗುತ್ತದೆ ಎಂದರು.


ಬಿಇಒ ಎಚ್.ಎನ್. ನಾಯಕ ಮಾತನಾಡಿದರು, ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ ಧ್ವಜಾರೋಹಣ ನೆರವೇರಿಸಿದರು. ತಹಸೀಲ್ದಾರ ಅನಿಲ ಬಡಿಗೇರ, ಎಂ.ಎಂ. ಹವಳದ, ಫಕೀರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ, ದೀಪು ಕಪ್ಪತ್ತನವರ, ಅಕ್ಬರ್ ಯಾದಗಿರಿ, ರಾಮಣ್ಣ ಕಂಬಳಿ, ಹೊನ್ನಪ್ಪ ಶಿರಹಟ್ಟಿ, ಎಸ್.ಎಸ್. ಕಲ್ಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net