ಕ್ರೀಡೆ ಬದುಕಿನ ಅವಿಭಾಜ್ಯ ಅಂಗ

web5
ಕಡಬಿ ಗ್ರಾಮದಲ್ಲಿ ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಯನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ಯಲ್ಲಾಲಿಂಗ ಸ್ವಾಮೀಜಿ, ಜ್ಯೋತೆಪ್ಪ ಸ್ವಾಮೀಜಿ ಇತರರು ಇದ್ದರು.
Published on

ಕಡಬಿ: ಸದೃಢ ದೇಹದಲ್ಲಿ ಆರೋಗ್ಯಕರ ಮನಸ್ಸು ಇರಲು ಸಾಧ್ಯ. ಕ್ರೀಡೆ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.]

ಗ್ರಾಮದಲ್ಲಿ ಗಣೇಶ ಚತುರ್ಥಿ ನಿಮಿತ್ತ ಸ್ಥಳೀಯ ಗಜಾನನ ಮಿತ್ರ ಮಂಡಳಿಯಿಂದ ಭಾನುವಾರ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಕಡಬಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಿ 30 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯನ್ನಾಗಿಸುವೆ. ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 14 ಕೋಟಿ ರೂ.ವೆಚ್ಚದಲ್ಲಿ ಯರಝರ್ವಿಯಿಂದ ಕಡಬಿವರೆಗೆ ರಸ್ತೆ ನಿರ್ಮಿಲಾಗುವುದು. ಸಿದ್ಧಾರೂಢರ ಮಠದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಿಸಲಾಗುವುದು ಎಂದರು. ಯರಝರ್ವಿ ಮಠದ ಯಲ್ಲಾಲಿಂಗ ಸ್ವಾಮೀಜಿ, ಜ್ಯೋತೆಪ್ಪ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ಕೀರಪ್ಪ ಸುಣಧೋಳಿ, ಛಾಯಪ್ಪ ಹುಂಡೇಕಾರ, ರೇವಪ್ಪ ರೆಬ್ಬನ್ನವರ, ಸಂಜು ಹುಂಡೇಕಾರ, ಪ್ರಕಾಶ ವಾಲಿ, ಲಕ್ಷ್ಮಣ ಕುಂಟಿರಪ್ಪಗೋಳ, ಷಣ್ಮುಖ ಮಾಳಕ್ಕನವರ, ಗಂಗಪ್ಪ ಮೀಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net