ದಕ್ಷಿಣ ಭಾರತ ಅಥ್ಲೆಟಿಕ್ಸ್ ಸ್ಪರ್ಧೆಗೆ ಕೊಡಗಿನ ೯ ಕ್ರೀಡಾಪಟುಗಳು

7mdks7 - Copy
Published on

ಸೋಮವಾರಪೇಟೆ: ಆಂಧ್ರಪ್ರದೇಶದ ಗುಂಟೂರಿನಲ್ಲಿ ಸೆ.೯ ರಿಂದ ೧೧ ರವರೆಗೆ ಆಯೋಜಿಸಿರುವ ೧೬ ವಯೋಮಾನದವರ ದಕ್ಷಿಣ ಭಾರತ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೂಡಿಗೆ ಕ್ರೀಡಾ ಶಾಲೆಯ ೯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಅಥ್ಲೇಟಿಕ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆಯಿತು. ಟ್ರಿಪಲ್ ಜಂಪ್‌ನಲ್ಲಿ ಕೆ.ಎನ್. ಭೂಮಿಕ (ಪ್ರ), ಎಸ್. ಪುನಿತ್ (ತೃ), ೪೦೦ ಮೀಟರ್ ಹರ್ಡಲ್ಸ್ ನಲ್ಲಿ ಜಿ.ಎಸ್. ಸಹನ (ದ್ವಿ), ಬಿ.ಬಿ. ಸಚಿನ್(ದ್ವಿ), ೪೦೦ ಓಟದ ಸ್ಪರ್ಧೆಯಲ್ಲಿ ಎನ್.ಸಿ. ಮಾನಸ (ಪ್ರ), ೮೦೦ ಮೀಟರ್ ಓಟದಲ್ಲಿ ರಮೇಶ್(ದ್ವಿ), ೧,೫೦೦ ಮೀಟರ್ಸ್‌ ಓಟದಲ್ಲಿ ಎಚ್.ವಿ. ಚಿಂತನ್(ದ್ವಿ), ೨,೦೦೦ ಮೀಟರ್ ಓಟದಲ್ಲಿ ಬಿ.ವಿ. ದೀಕ್ಷ (ಪ್ರ), ಎಂ.ಎಂ. ಸ್ನೇಹ(ದ್ವಿ), ೨,೦೦೦ ಸ್ಟಿಪಲ್ ಚೇಸ್‌ನಲ್ಲಿ ಭೀಮಶಂಕರ್ (ಪ್ರ) ಸ್ಥಾನ ಗಳಿಸಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net