ಮನೋದೈಹಿಕ ಆರೋಗ್ಯಕ್ಕೆ ಕ್ರೀಡಾಕೂಟ ಅಗತ್ಯ

h17-sports
Published on

ಹುಬ್ಬಳ್ಳಿ: ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಶಾಡಿಜೆ ಛೇಡಾ ಐಟಿಐ ವಾರ್ಷಿಕ ಕ್ರೀಡಾಕೂಟವನ್ನು ನಗರದ ಸೆಟ್ಲಮೆಂಟ್ ಯಂಗ್‌ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಶ್ರೀ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್.ಕೆ. ಆದಪ್ಪನವರ ಮಾತನಾಡಿ, ಮನೋದೈಹಿಕ ಆರೋಗ್ಯಕ್ಕೆ ಕ್ರೀಡಾಕೂಟ ಅತ್ಯಗತ್ಯ. ವ್ಯಾಯಾಮ ಮಾಡುವುದರಿಂದ ಆರೋಗ್ಯ ಸಂರಕ್ಷಿಸಿಕೊಳ್ಳಬಹುದು. ಪಠ್ಯೇತರ ಚಟುವಟಿಕೆಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದರು.
ಕಾರ್ಯದರ್ಶಿ ಆರ್.ಟಿ. ಅಣ್ಣಿಗೇರಿ, ಆರ್.ಬಿ. ಸಾಬಣ್ಣವರ, ಆರ್.ಎನ್. ಕೋಟಿ, ವಿಜಯಲಕ್ಷ್ಮೀ ಮಂದವಾಡಿ, ಎಂ.ಕೆ. ಲಿಂಬಿಕಾಯಿ, ಎಸ್.ಜೆ. ಹಿರೇಮಠ, ಆರ್.ಎನ್. ಅಪ್ಪಣ್ಣವರ, ಡೊಕ್ಕಾ ಜಾಕೋಬ, ವಿ.ವಿ. ಮೇಲ್ಮುರಿ, ಚೇತನಾ ಪತ್ರಾವಳಿ, ಎಂ.ಎಂ. ಹೂಗಾರ, ಚಳ್ಳಪ್ಪ ಜೈನರ, ಸಾಹಿನಾ ಅಗಸಿಮನಿ, ಅಶೋಕ ನಾವಳ್ಳಿ, ಗುರುಸಿದ್ದಪ್ಪ ಬಡಿಗೇರ, ಸುಧೀರ ಕಡಬಿ, ವಿ.ಡಿ. ಧರಣೆಪ್ಪನವರ, ನಾಗೇಶ ಪತ್ತಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net