

ಕಾರ್ಕಳ: ಸದಾ ಲವಲವಿಕೆಯಿಂದ ಇರಲು ಕ್ರೀಡೆ ಅತ್ಯಂತ ಪ್ರಯೋಜನಕಾರಿ. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ, ವಾನಸಿಕವಾಗಿ ಪರಿಣಾಮಕಾರಿಯಾಗಿದೆ. ಕ್ರೀಡೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಪ್ರೇರಣೆೆ ನೀಡುವ ಪ್ರಕ್ರಿಯೆ ಎಂದು ಇನ್ನಾ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ ಹೇಳಿದರು.
ಇನ್ನಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಬೆಳ್ಮಣ್ ವಲಯ ಮಟ್ಟದ 14ರ ವಯೋವಾನದ ಒಳಗಿನ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ವಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸರಿತಾ ಶೆಟ್ಟಿ, ಶಿಕ್ಷಣ ಸಂಯೋಜಕ ಪ್ರಕಾಶ್, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಕುಶ ಆರ್.ಮೂಲ್ಯ, ಚಂದ್ರಹಾಸ ಶೆಟ್ಟಿಗಾರ್, ತಾಲೂಕು ದೈಹಿಕ ಶಿಕ್ಷಕರ ಸಂ ಅಧ್ಯಕ್ಷ ವಸಂತ, ಸಿಆರ್‌ಪಿ ಶ್ರೀಕಾಂತ ಮೂಲ್ಯ, ಹಳೇ ವಿದ್ಯಾರ್ಥಿ ಸಂ ಉಪಾಧ್ಯಕ್ಷ ಹರೀಶ್ ಶೆಟ್ಟಿ, ರಾಕೇಶ್, ಶಾಲೆ ವಾಜಿ ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರನ್ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಅಶ್ವಿನಿ ಸ್ವಾಗತಿಸಿದರು. ಶಿಕ್ಷಕಿ ಆರತಿ ವಂದಿಸಿದರು.