

ಆರ್ಡಿ: ಸೋಲು ಗೆಲುವುಗಳನ್ನು ಕ್ರೀಡಾಸ್ಪೂರ್ತಿಯಿಂದ ತೆಗೆದುಕೊಳ್ಳುವವರೇ ನೈಜ ಕ್ರೀಡಾಪಟು. ಕ್ರೀಡೆಯ ಪ್ರತಿಯೊಂದು ಹಂತಗಳೂ ಜೀವನಾನುಭವಕ್ಕೆ ಮೆಟ್ಟಿಲುಗಳಾಗುತ್ತವೆ. ಛಲವೊಂದಿದ್ದರೆ ಆಟೋಟಗಳಲ್ಲಿ ಗೆಲವು ಸಾಧಿಸಬಹುದು ಎಂದು ಹೆಬ್ರಿ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಹರ್ಷ ಶೆಟ್ಟಿ ಬೇಳಂಜೆ ಅಭಿಪ್ರಾಯಪಟ್ಟರು.
ಆರ್ಡಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಡುಪಿ ಜಿಲ್ಲಾಮಟ್ಟದ ಖೋ-ಖೋ ಪಂದ್ಯಾಟ ಉದ್ಘಾಟಿಸಿ ವಾತನಾಡಿದರು.
ಹಳೇ ವಿದ್ಯಾರ್ಥಿ ಸಂದ ಉಪಾಧ್ಯಕ್ಷ ಜಯದೇವ ಹೆಗ್ಡೆ ಅಂಕಣವನ್ನು ಉದ್ಘಾಟಿಸಿದರು. ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಎಸ್.ಚಂದ್ರಶೇಖರ್ ಶೆಟ್ಟಿ, ರೋಹಿತ್‌ಕುವಾರ್ ಶೆಟ್ಟಿ, ಸಂತೋಷ ಪೂಜಾರಿ, ದಯಾನಂದ ಪೂಜಾರಿ, ಎಸ್.ಜಯರಾಮ ಶೆಟ್ಟಿ, ಸುರೇಶ ಶೆಟ್ಟಿ, ಸುದರ್ಶನ್ ಶೆಟ್ಟಿ, ಪ್ರಹ್ಲಾದ್ ಶೆಟ್ಟಿ, ಸುದೀಪ್ ಹೆಗ್ಡೆ, ಕರುಣಾಕರ ಶೆಟ್ಟಿ, ದೀಪಿಕಾ ಎಸ್.ಶೆಟ್ಟಿ, ಸತ್ಯನಾರಾಯಣ, ನಿತ್ಯಾನಂದ ಶೆಟ್ಟಿ, ರವಿಚಂದ್ರ ಕಾರಂತ, ರವೀಂದ್ರ ನಾಯಕ್, ವಿಜಯಕುವಾರ್ ಶೆಟ್ಟಿ, ಕುಸುವಾಕರ ಶೆಟ್ಟಿ, ವಿಜಯಕುವಾರ್ ಶೆಟ್ಟಿ, ಬಿ.ಕಿಶನ್‌ರಾಜ್ ಶೆಟ್ಟಿ, ಶೇಖರ ಶೆಟ್ಟಿಗಾರ್ ಇತರರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಪ್ರಕಾಶ್ ಭಟ್ ಸ್ವಾಗತಿಸಿದರು. ಹೇಮಲತಾ ವಂದಿಸಿದರು. ಜಯಶೀಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.