ಪ್ರಾಥಮಿಕ/ಪ್ರೌಢ ಶಾಲಾ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

18GDG08
ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ- ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ರವಿ ಗುಮಜೀಕರ್​, ಎಂ.ಎಂ. ರಡ್ಡೇರ್​, ಆರ್​. ಎಸ್​. ಬುರಡಿ, ವಿ. ಎಂ.ಹಿರೇಮಠ, ವಸಂತ ಕಲಕಂಬಿ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆ ಸಹಕಾರಿಯಾಗಲಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ ಹೇಳಿದರು.
ಬುಧವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ- ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮೀಣ ವಿದ್ಯಾಥಿರ್ಗಳಲ್ಲಿರು ಪ್ರತಿಭೆಯನ್ನು ಪಾಲಕರು, ದೈಹಿಕ ಶಿಕ್ಷಕರು ಗುರುತಿಸಿ ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಲು ಪ್ರೋತ್ಸಾಹ, ತರಬೇತಿ ನೀಡುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಯಗಳಿಸುವಂತೆ ವಿದ್ಯಾಥಿರ್ಗಳನ್ನು ಸಿದ್ಧತೆಗೊಳಿಸಬೇಕು ಎಂದರು.
ಡಯಟ್​ ಪ್ರಾಚಾರ್ಯ ಜಿ. ಎಲ್​. ಬಾರಾಟಕ್ಕೆ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಶಾರೀರಿಕ ಬೆಳವಣಿಗೆಯ ಜೊತೆಗೆ ಮಾನಸಿಕ ಬೆಳವಣಿಗೆ ವೃದ್ದಿಯಾಗಲಿದೆ. ನಿರ್ಣಾಯಕ ನಿರ್ಣಯಕ್ಕೆ ಬದ್ಧರಾಗಿ ಸಕ್ರೀಯವಾಗಿ ಕ್ರೀಡೆ ಗಳಲ್ಲಿ ಭಾಗವಹಿಸಿ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದರು.
ಡಿಡಿಪಿಐ ಎಂ. ಎ. ರಡ್ಡೇರ ಮಾತನಾಡಿ ವಿದ್ಯಾಥಿರ್ಗಳಲ್ಲಿ ಶರೀರ ಸಂಪತ್ತು ಇದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಅದರಂತೆ ಇಲಾಖೆ ಬೌದ್ಧಿಕ ಬೆಳವಣಿಗೆ ಜೊತೆಗೆ ದೈಹಿಕ, ಮಾನಸಿಕ ಬೆಳವಣಿಗೆಗಾಗಿ ಕ್ರೀಡಾ ಕೂಟಗಳನ್ನು ಆಯೋಜಿಸಿಸಲಾಗುತ್ತಿದೆ ಎಂದರು.
ಆರ್​. ಎಸ್​. ಬುರಡಿ, ವಿ. ಎಂ.ಹಿರೇಮಠ, ವಸಂತ ಕಲಕಂಬಿ, ಕೆ. ಬಿ. ಕೊಣ್ಣೂರ, ಬಿ. ಎಫ್​. ಪೂಜಾರ, ಎಂ. ಎಂ. ಹವಳದ, ಜಿ. ಎಂ. ಜಗದೀಶ, ಟಿ. ಎಸ್​.ಪವಾರ, ಬಸವಣ್ಣೆಪ್ಪ, ಎಂ. ಎಚ್​. ಕುಚಬಾಳ, ಎಸ್​. ಬಿ. ಮುಳಗುಂದ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net