

ವಿಜಯವಾಣಿ ಸುದ್ದಿಜಾಲ ಗದಗ
ಬೆಟಗೇರಿ ಶರಣಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ಮಕ್ಕಳ ಪಾಲಕರಿಗೆ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಮಕ್ಕಳಿಗೆ ತಾಯಿಯ ಕೈತ್ತುತ್ತು ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಸುಮಾ ಹಚಡದ, ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯವರು ಮಹತ್ವರ್ಪೂಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪಾಲಕರು ಆಟಗಳಲ್ಲಿ ಭಾಗವಹಿಸಿದ್ದಾರೆ. ಮಕ್ಕಳಿಗೆ ತಾಯಂದಿರ ಕೈತುತ್ತು ಉಣಬಡಿಸುವ ಕಾರ್ಯಕ್ರಮ ವಿಶೇಷವವಾಗಿದೆ ಎಂದರು.
ಶಾಲಾ ಆಡಳಿತಾಧಿಕಾರಿ ವೈ. ಆರ್. ಪಾಟೀಲ ಮಾತನಾಡಿ, ವರ್ಷದಲ್ಲಿ ಒಮ್ಮೆಯಾದರು ಪಾಲಕರು ಮಕ್ಕಳೊಂದಿಗೆ ಶಾಲೆಯಲ್ಲಿ ಪಂದ್ಯಾಟಗಳಲ್ಲಿ ಭಾಗವಹಿಸುವದರಿಂದ ಅವರ ಹಿಂದಿನ ಶಾಲಾ ಅವಧಿಯ ಸವಿನೆನಪುಗಳು ಮರುಕಳಿಸುತ್ತವೆ. ಮಕ್ಕಳಿಗೆ ತಾಯಂದಿರು ತುತ್ತು ಮಾಡಿ ಉಣಿಸುವದರಿಂದ ಪಾಲಕರ ಬಗ್ಗೆ ಮಕ್ಕಳಲ್ಲಿ ಗೌರವ ಮಮತೆ ಹೆಚ್ಚಾಗುತ್ತದೆ ಎಂದರು.
ಎಸ್. ಎಸ್. ಮಾನೇದ, ಎಸ್. ಪಿ. ಕುಲಕಣಿರ್, ಬಸಣ್ಣ ಕನ್ನೇರಿ, ಸಿದ್ಧಲಿಂಗಪ್ಪ ಕಾತರಕಿ, ಎಂ. ಎಸ್. ಮಲ್ಲಾಪೂರ, ಜಂಬಣ್ಣ ಕಾತರಕಿ, ಎಸ್. ವಿ. ಡಿಗ್ಗಾವಿ ಇತರರು ಇದ್ದರು.