

ಮೈಸೂರು: ಉತ್ತಮ ಪ್ರದರ್ಶನ ನೀಡಿದ ಕ್ರೀಡಾ ಹಾಸ್ಟೆಲ್ ಮೈಸೂರು ತಂಡ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಪಡೆಯಿತು. ಕ್ಯಾತಮಾರನಹಳ್ಳಿ ಹ್ಯಾಪಿ ಗರ್ಲ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಕ್ರೀಡಾ ಹಾಸ್ಟೆಲ್ ಮೈಸೂರು ಮಹಿಳೆಯರ ತಂಡ ನಿಗದಿತ 6 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 36ರನ್ ಗಳಿಸಿತು. ಗುರಿ ಬೆನ್ನತ್ತಿದ ಹ್ಯಾಪಿ ಗರ್ಲ್ಸ್ ತಂಡ 4.5 ಓವರ್‌ಗಳಲ್ಲಿ 29ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸುಲಭದ ತುತ್ತಾಯಿತು.