

ಮಂಗಳೂರು : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯ ಹಾಗೂ ಜಿಲ್ಲಾ ಕ್ರೀಡಾ ಶಾಲೆ/ವಸತಿ
ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಜ.10 ರಂದು ತಾಲೂಕು ಕ್ರೀಡಾಂಗಣ (ಸ್ವರಾಜ್ ಮೈದಾನ) ಮೂಡುಬಿದಿರೆ, 11ರಂದು ವಿಠಲ ಪ್ರೌಢಶಾಲೆ ಮೈದಾನ, ವಿಟ್ಲ., 13ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯ, 15 ರಂದು ಬೆಳಿಗ್ಗೆ 10 ಗಂಟೆಯಿಂದ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜು ನೂಜಿ ಬಾಳ್ತಿಲ, ಕಡಬ, 18ರಂದು ತಾಲೂಕು ಕ್ರೀಡಾಂಗಣ ಕೊಂಬೆಟ್ಟು, ಪುತ್ತೂರು, 20ರಂದು ಮಂಗಳೂರು ವಿಶ್ವವಿದ್ಯಾಲಯ ಮೈದಾನ ಕೊಣಾಜೆ, 21ರಂದು ಸರ್ಕಾರಿ ಪ್ರೌಢಶಾಲೆ ಪುಂಜಾಲಕಟ್ಟೆ, ಬೆಳ್ತಂಗಡಿ, 22ರಂದು ಸೈಂಟ್ ಅಲೋಶಿಯಸ್ ಸ್ಕೂಲ್ ಉರ್ವ ಮಂಗಳೂರು ಇಲ್ಲಿ ಪ್ರತೀ ದಿನ ಬೆಳಗ್ಗೆ 10ರಿಂದ ಆಯ್ಕೆ ಶಿಬಿರ ನಡೆಯಲಿದೆ.
*ಕಿರಿಯರ ವಿಭಾಗ
ಮಂಗಳೂರಿನ ದ.ಕ.ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2025-26ನೇ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು .2025ನೇ ಜೂ.1 ರಂದು 11 ವರ್ಷ ಒಳಗಿನವರಾಗಿರಬೇಕು. ಪ್ರಸ್ತುತ ವರ್ಷ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2025-26ನೇ ಸಾಲಿಗೆ 8ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು ತಾಲೂಕು ಮಟ್ಟದಲ್ಲಿ ಅರ್ಹತೆ ಪಡೆದು ರಾಜ್ಯ ಮಟ್ಟದ ಕ್ರೀಡಾ ಶಾಲೆ/ನಿಲಯಕ್ಕೆ ಆಯ್ಕೆ ಬಯಸುವವರು ಫೆ.10 ರಂದು ಉಡುಪಿಯಲ್ಲಿ ನಡೆಯುವ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು.
* ಹಿರಿಯರ ವಿಭಾಗ
ಹಿರಿಯ ವಿಭಾಗದ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2025-26ನೇ ಸಾಲಿಗೆ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದು, 2025ನೇ ಜೂನ್ 1 ರಂದು 18 ವರ್ಷ ಒಳಗಿನವರಾಗಿರಬೇಕು. ಹಿರಿಯ ವಿಭಾಗಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು ಫೆ. 11 ರಂದು ಉಡುಪಿಯಲ್ಲಿ ನಡೆಯುವ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಬೇಕು.
ಜಿಲ್ಲಾ ಮತ್ತು ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸಂಬಂಧಪಟ್ಟ ತಾಲೂಕುಗಳಲ್ಲಿ
ಭಾಗವಹಿಸಬೇಕು. ಸಂಬಂಧಪಟ್ಟ ತಾಲೂಕಿನಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದಲ್ಲಿ ಜಿಲ್ಲೆಯ ಇತರೆ ತಾಲೂಕಿನಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವ ವಿದ್ಯಾರ್ಥಿಗಳು ದೃಢೀಕೃತ ಜನನ ಪ್ರಮಾಣ ಪತ್ರವನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7019144302 ಹಾಗೂ 0824- 2451264 ರನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.