

ಸಾಗರ: ಕೊಠಡಿಯೊಳಗಿನ ಶಿಕ್ಷಣಕ್ಕೆ ಪಾಲಕರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಗಟ್ಟಿಯಾಗಲು ಆಟೋಟಗಳಲ್ಲಿ ತೊಡಗಿಕೊಳ್ಳುವುದು ಬಹಳ ಮುಖ್ಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರದÀ ನೆಹರು ಮೈದಾನದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಽಕಾರಿಗಳ ಕಚೇರಿ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ತಾಲೂಕು ಮಟ್ಟದ ೧೭ ವರ್ಷದೊಳಗಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಓದಿನಲ್ಲಿ ಶ್ರದ್ಧೆ ಇರಬೇಕಾದರೆ ಮಾನಸಿಕ ಮತ್ತು ದೈಹಿಕವಾಗಿ ದೃಢವಾಗಿರಬೇಕು. ಹಾಗಾಗಿ ಕ್ರೀಡೆ ಮಕ್ಕಳ ವ್ಯಕ್ತಿತ್ವ ರೂಪಿಸಿಕೊಳ್ಳಲು, ಆರೋಗ್ಯವಂತರಾಗಿರಲು ಸಹಾಯ ಮಾಡುತ್ತದೆ. ಪ್ರೌಢಶಾಲೆ ನಂತರ ವಿದ್ಯಾರ್ಥಿಗಳು ಕ್ರೀಡೆಯನ್ನು ಮೊಟಕುಗೊಳಿಸದೆ ನಿರಂತರವಾಗಿ ತೊಡಗಿಸಿಕೊಂಡು ಅಂತಾರಾಷ್ಟಿçÃಯ ಮಟ್ಟಕ್ಕೆ ತಲುಪುವತ್ತ ಗಮನ ಹರಿಸಬೇಕು. ತಾಲೂಕಿನ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಕ್ರೀಡಾಂಗಣಗಳಿಗೆ ಕೆಲವು ಅಗತ್ಯತೆಗಳಿದ್ದು ಅದನ್ನು ಪೂರೈಸುವುದಾಗಿ ಭರವಸೆ ನೀಡಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ ಮಾತನಾಡಿ, ಸದೃಢ ದೇಹ ಮತ್ತು ಸದೃಢ ಮನಸ್ಸು ಇದ್ದಾಗ ಶಿಕ್ಷಣದಲ್ಲಿ ಏಕಾಗ್ರತೆ ಸಾಽಸಲು ಸಾಧ್ಯ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಪ್ರಮುಖರಾದ ಲಕ್ಷ÷್ಮ ಆರ್.ನಾಯ್ಕ್, ಜಿ.ಮಹಾಬಲೇಶ್ವರ, ಡಾ. ಅನ್ನಪೂರ್ಣಾ, ಪ್ರೇಮಕುಮಾರಿ, ಗುರುರಾಜ್, ಮಂಜಪ್ಪ, ಸಿಂಚನ, ಪರಶುರಾಮ್, ಟಿ.ಪಿ.ಸುಬ್ರಹ್ಮಣ್ಯ, ಮಹೇಂದ್ರ ಇತರರಿದ್ದರು.
ಮಕ್ಕಳ ಜತೆ ಸೆಲಿ
ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಕ್ಕಳಿಗೆ ಅವರ ಶಿಸ್ತು, ಸಮವಸ್ತçವನ್ನು ಒಳಗೊಂಡAತೆ ವಿಶೇಷ ಬಹುಮಾನ ನೀಡುವ ವ್ಯವಸ್ಥೆ ಆಗಬೇಕು. ಈ ಬಗ್ಗೆ ದಾನಿಗಳಿಂದ ಸಹಕಾರ ಕೊಡಿಸುತ್ತೇನೆ ಎಂದು ಅಭಯ ನೀಡಿದ ಶಾಸಕ ಬೇಳೂರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಕ್ಕಳ ಜತೆ ಮಾತನಾಡಿ ಕುಂದುಕೊರತೆ ವಿಚಾರಿಸಿ ಮುಗಿಬಿದ್ದ ಮಕ್ಕಳ ಸೆಲಿಗೆ ಫೋಸ್ ನೀಡಿ ಸಂತಸಪಟ್ಟರು.