ದೈಹಿಕ-ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ; ಸಿಪಿಐ ಎಂ.ಎಂ. ಡಪ್ಪಿನ

HIREMASALI WALIBALL
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ವಿಷ್ಣು ಸೇನಾ ಗಜಾನನ ಯುವಕ ಮಂಡಳದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಫ್ರೆಂಡ್ಸ್ ವಾಲಿಬಾಲ್ ಕ್ರೀಡಾಕೂಟ’ಕ್ಕೆ ಚಾಲನೆ ನೀಡಿ ಸಿಪಿಐ ಎಂ.ಎಂ. ಡಪ್ಪಿನ ಮಾತನಾಡಿದರು. ರಾಹುಲ್ ಎಸ್. ನಾಯಕ, ಮನೋಜಗೌಡ ಪಾಟೀಲ, ನಿಂಗಪ್ಪ ತಿಳಗುಳ ಮತ್ತಿತರರಿದ್ದಾರೆ.
Published on

ಇಂಡಿ: ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ. ಪರಸ್ಪರ ಹೊಂದಾಣಿಕೆ ಮನೋಭಾವದಿಂದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಬಾಂಧವ್ಯ ವೃದ್ಧಿಯಾಗಲಿದೆ ಎಂದು ಗ್ರಾಮೀಣ ಸಿಪಿಐ ಎಂ.ಎಂ. ಡಪ್ಪಿನ ಹೇಳಿದರು.

ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ವಿಷ್ಣು ಸೇನಾ ಗಜಾನನ ಯುವಕ ಮಂಡಳದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಫ್ರೆಂಡ್ಸ್ ವಾಲಿಬಾಲ್ ಕ್ರೀಡಾಕೂಟ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಯಿಂದ ದೈಹಿಕ ಸದೃಢತೆ ಮಾತ್ರವಲ್ಲ, ಮಾನಸಿಕ ಸದೃಢತೆಯೂ ಹೆಚ್ಚಾಗಲಿದೆ. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸುಂದರ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಅವರು ಹೇಳಿದರು.

ಕ್ರೀಡೆಗಳು ಸೌಹಾರ್ದಯುತವಾಗಿ ನಡೆಯಬೇಕು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸ್ಪರ್ಧಾ ಮನೋಭಾವ ಇರಲಿ ಆದರೆ, ಗೆಲುವಿಗಾಗಿ ವಾಮ ಮಾರ್ಗ ಅನುಸರಿಸಬಾರದರು. ಪರಸ್ಪರ ದ್ವೇಷ ಸಾಧಿಬಾರದು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಅಲ್ಲೂ ಉದ್ಯೋಗವಕಾಶಗಳಿವೆ. ಹೀಗಾಗಿ ಕ್ರೀಡೆ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಬೇಕೆಂದರು.

ಅಬಕಾರಿ ನಿರೀಕ್ಷಕ ರಾಹುಲ್ ಎಸ್. ನಾಯಕ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಯುವ ಪಡೆ ಹೆಚ್ಚು ದುಶ್ಚಟಗಳತ್ತ ವಾಲುತ್ತಿರುವುದು ಕಂಡು ಬರುತ್ತಿದೆ. ಹಾಗಾಗಬಾರದು. ಯುವಕರು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಗ್ರಾಮೀಣರು ಕ್ರೀಡೆಗಳನ್ನು ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕೆಂದರು.

ಮುಖಂಡ ಮನೋಜಗೌಡ ಪಾಟೀಲ, ನಿಂಗಪ್ಪ ತಿಳಗುಳ, ಸೋಮು ಪಟ್ಟಣಶೆಟ್ಟಿ, ಮಿಲಿಂದ ಹೊಸಮನಿ, ಎಸ್‌ಡಿ ಎಂಸಿ ಅಧ್ಯಕ್ಷ ಪಿರಪ್ಪ ಭಾವಿಕಟ್ಟಿ, ವಿಠ್ಠಲ ಬೋರುಟಗಿ, ವಿಷ್ಣು ಸೇನಾ ಸಮಿತಿಯ ಸದಸ್ಯ ಬಸವರಾಜ ಪಟ್ಟಣಶೆಟ್ಟಿ, ರಾಜು ಹುಬ್ಬಳ್ಳಿ, ಅನೀಲ ನಂದ್ಯಾಳ, ಶರಣು ಹತ್ತಿ, ಅನಿಲ ರಜಪೂತ, ಸಿದ್ದು ಕುರುಬತಳ್ಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net