ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿ

IMG-20241128-WA0023.jpg
Published on

ಬೆಳಗಾವಿ: ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಬಿ.ಇ. ರಂಗಸ್ವಾಮಿ ಹೇಳಿದರು.

ನಗರದ ಮಚ್ಚೆ ಬಳಿ ಕೆಎಸ್‌ಆರ್‌ಪಿ 2ನೇ ಪಡೆಯ ಪೊಲೀಸ್ ಕ್ಯಾಂಪ್‌ನಲ್ಲಿ ಬೆಳಗಾವಿಯ ಪಿಟಿಎಸ್ ಕಂಗ್ರಾಳಿ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ವಾರ್ಷಿಕ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಸಮಾಜದ ನೆಮ್ಮದಿಗಾಗಿ ಹಗಲಿರುಳು ಕೆಲಸ ಮಾಡುವ ಪೊಲೀಸರು ದೈಹಿಕ ಮತ್ತು ಮಾನಸಿಕ ಸದೃಢತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ದೈನಂದಿನ ಕೆಲಸ ಕಾರ್ಯಗಳ ಸಂದರ್ಭ ಪೊಲೀಸರು ಹೊಸ ಸವಾಲು ಹಾಗೂ ಸಮಸ್ಯೆ ಎದುರಿಸುವುದು ಅನಿವಾರ್ಯವಾಗಿದೆ. ಇಂತಹ ಒತ್ತಡಗಳಿಂದ ಹೊರಬರಲು ಕ್ರೀಡೆ ಸಹಾಯ ಮಾಡುತ್ತದೆ ಎಂದರು.

ದಿನದ 24 ಗಂಟೆ ಜನರ ಭದ್ರತೆಗೆ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾರ್ಯದೊಂದಿಗೆ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯ. ನಿಯಮಿತವಾಗಿ ಯೋಗ, ವ್ಯಾಯಾಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸದೃಢ ಮನಸ್ಸನ್ನು ಹೊಂದಬೇಕು. ಕ್ರೀಡಾಕೂಟವನ್ನು ಹಬ್ಬವೆಂದು ಪರಿಗಣಿಸಿ, ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಕೆಎಸ್‌ಆರ್‌ಪಿ 2ನೇ ಪಡೆಯ ಕಮಾಂಡೆಂಟ್ ರಮೇಶ ಬೊರಗಾವೆ ಅಧ್ಯಕ್ಷತೆ ವಹಿಸಿದ್ದರು. ಕಂಗ್ರಾಳಿ ಪಿಟಿಎಸ್ ಪ್ರಾಚಾರ್ಯ ಕೆ. ಎಂ. ಮಹಾದೇವಪ್ರಸಾದ, ಖಾನಾಪುರ ಪಿಟಿಎಸ್ ಪ್ರಾಚಾರ್ಯ ಅಮರಸಿದ್ದ ಗೊಂದಳಿ, ಬೆಳಗಾವಿ ಡಿಸಿಪಿ ಸಿಎಆರ್ ಸಿದ್ದನಗೌಡ ಪಾಟೀಲ, ಸಹಾಯಕ ಕಮಾಂಡೆಂಟ್‌ಗಳಾದ ಚನ್ನಬಸವ, ನಾಗೇಶ ಯಡಾಳ, ಅವಿನಾಶ ಮೇಘಣ್ಣವರ ಇದ್ದರು. ಕ್ರೀಡಾಕೂಟದಲ್ಲಿ ಪುರುಷರಿಗೆ ರನ್ನಿಂಗ್, ವಾಲಿಬಾಲ್, ಬ್ಯಾಡ್ಮಿಂಟನ್, ಕಬಡ್ಡಿ, ಮಹಿಳೆಯರಿಗೆ ಜಂಪಿಂಗ್, ರನ್ನಿಂಗ್ ಪಂದ್ಯಾವಳಿಗಳು ನಡೆದವು.

28 ಜಗ್ಗು 5: ಬೆಳಗಾವಿ ಮಚ್ಚೆ ಬಳಿ ಕೆಎಸ್‌ಆರ್‌ಪಿ 2ನೇ ಪಡೆಯ ಪೊಲೀಸ್ ಕ್ಯಾಂಪ್‌ನಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಸಚಿವ ಡಾ. ಬಿ.ಇ. ರಂಗಸ್ವಾಮಿ ಚಾಲನೆ ನೀಡಿದರು. ರಮೇಶ ಬೊರಗಾವೆ, ಕೆ.ಎಂ. ಮಹಾದೇವ ಪ್ರಸಾದ, ಅಮರಸಿದ್ದ ಗೊಂದಳಿ, ಸಿದ್ದನಗೌಡ ಪಾಟೀಲ, ನಾಗೇಶ ಯಡಾಳ, ಅವಿನಾಶ ಮೇಘಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net