

ಮುಂಡರಗಿ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮಹತ್ತರ ಪಾತ್ರವಹಿಸುವ ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಮಕ್ಕಳು ಸಧೃಡರಾಗಬಹುದು ಎಂದು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ.ಜಿ. ಜವಳಿ ಹೇಳಿದರು.
ಧ್ಯಾನ್ಚಂದ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪದವಿಪೂರ್ವ ಕಾಲೇಜ್ನ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ 2024-25 ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕ.ರಾ. ಬೆಲ್ಲದ ಕಾಲೇಜ್ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಮನೋಜ ಕೋಪರ್ಡೆ ಮಾತನಾಡಿ, ಧ್ಯಾನ್ಚಂದ ಅವರ ಕ್ರೀಡಾ ಸಾಧನೆ, ನಡೆದು ಬಂದ ಹಾದಿ ಬಗೆಗೆ ತಿಳಿಸಿದರು.
ಕಾಲೇಜ್ ಮೇಲ್ವಿಚಾರಣಾ ಸಮಿತಿ ಉಪಕಾರ್ಯಾಧ್ಯಕ್ಷ ಡಾ.ಎಸ್.ಬಿ. ಹಿರೇಮಠ ಮಾತನಾಡಿದರು. ಕಾಲೇಜು ಮೇಲ್ವಿಚಾರಣಾ ಸಮಿತಿ ಸದಸ್ಯರಾದ ಬಸವರಾಜ ಬನ್ನಿಕೊಪ್ಪ, ಎಂ.ಎಸ್. ಶಿವಶೆಟ್ಟರ, ಸನ್ಮಾನಿತರಾದ ಅಂತಾರಾಜ್ಯ ಮಟ್ಟದ ಕ್ರಿಕೆಟ್ ಕ್ರೀಡಾಪಟು ಪುಟ್ಟರಾಜ ಚಿಂಚಲಿ, ಪ್ರಾಚಾರ್ಯ ಎಸ್. ಶಿವರಾಜಸ್ವಾಮಿ, ಶ್ರೀಕಾಂತ ಎಂ.ಎಲ್. ಪ್ರಶಸ್ತಿ, ಇತರರಿದ್ದರು.
ಪೊ›.ಐ.ಎನ್. ಪೂಜಾರ, ಪ್ರಾಚಾರ್ಯ ಎಸ್.ಶಿವರಾಜಸ್ವಾಮಿ, ಮಂಜು ಲೇಂಡ್ವೆ ಹಾಗೂ ಬಿ.ಎಸ್. ಜೋಗಿನ ಕಾರ್ಯಕ್ರಮ ನಿರ್ವಹಿಸಿದರು.