

ರೋಣ: ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ದಸರಾ ಕ್ರೀಡಾಕೂಟ ಸಹಕಾರಿಯಾಗಿದೆ. ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ. ಶಿಸ್ತು ಮತ್ತು ಸಂಯಮ ಮೈಗೂಡಿಸಿಕೊಳ್ಳಲು ಕ್ರೀಡೆ ಅನುಕೂಲವಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ತಾಪಂ ಇಒ ರವಿ ಎ.ಎನ್. ಮಾತನಾಡಿ, ದೇಶ ಸಮೃದ್ಧವಾಗಬೇಕಾದರೆ ಯುವಕರು ಹಾಗೂ ಮಹಿಳೆಯರು ಸದೃಢರಾಗಿರಬೇಕು. ಕ್ರೀಡಾಪಟುಗಳು ಕ್ರೀಡೆಯಲ್ಲಿ ಶಿಸ್ತ್ತಿನಿಂದ ಇರಬೇಕು. ಸೋಲು ಗೆಲುವು ಮುಖ್ಯ ಅಲ್ಲ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಸಹೋದರತ್ವ ಭಾವ ಹಾಗೂ ಸಮನ್ವಯ ಭಾವದಿಂದ ಇರಬೇಕು. ಕ್ರೀಡೆಯಲ್ಲಿ ಭಾಗವಹಿಸಿದಾಗ ಮಾನಸಿಕವಾಗಿ ಸದೃಢವಾಗಿರಲು ಸಾಧ್ಯ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಶರಣು ಗೋಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್. ಹುರಳಿ, ಎಂ.ಎ. ಫನಿಬಂಧ, ಎ.ಎಸ್. ದಾನರೆಡ್ಡಿ, ಜಗದೀಶ ಬೂದಿಹಾಳ, ಬಸವರಾಜ ಅಂಗಡಿ, ಜಗದೀಶ ಅಳ್ಳೊಳ್ಳಿ, ಕಲ್ಲನಗೌಡ ನಾಯ್ಕರ, ಮುತ್ತು ಪ್ರಧಾನಿ, ಮಲ್ಲಯ್ಯ ಸ್ಥಾವರಮಠ, ಬಸವರಾಜ ಹೊಸಳ್ಳಿ ಇತರರು ಇದ್ದರು.