ಬಾಂಧವ್ಯ ವೃದ್ದಿಗೆ ಕ್ರೀಡೆ ಸಹಕಾರಿ

SPORTS
Published on

ಲಕ್ಷ್ಮೇಶ್ವರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ಒದಗಿಸುತ್ತಿದೆ. ಯುವ ಜನತೆ ಮೊಬೈಲ್ ಗೀಳು, ದುಶ್ಚಟಗಳಿಂದ ಹೊರಬಂದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ತಾಲೂಕಿನ ಮಾಡಳ್ಳಿ ಗ್ರಾಮದ ಎನ್.ಜಿ ಪಾಟೀಲ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡಾಕೂಟಗಳು ದೈಹಿಕ, ಮಾನಸಿಕ ಆರೋಗ್ಯದ ಜತೆಗೆ ಪರಸ್ಪರ ಸ್ನೇಹ, ಬಾಂದವ್ಯ, ಸಹೋದರತ್ವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದರು.

ಶರಣು ಗೋಗೇರಿ, ತಹಸೀಲ್ದಾರ್ ಕೆ.ಆನಂದಶೀಲ, ತಾಪಂ ಇಒ ಕೃಷ್ಣಪ್ಪ ಧರ್ಮರ, ಬಿಇಒ ಜಿ.ಎಂ. ಮುಂದಿನಮನಿ, ನಿಂಬಣ್ಣ ಮಡಿವಾಳರ, ಸಿ.ವೈ. ಮೇಲಿನಮನಿ, ಹುಲಿಗೆಪ್ಪ ಕರೆಣ್ಣವರ, ಜಿ.ವಿ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net