ಕ್ರೀಡಾಕೂಟದಲ್ಲಿ ಸರ್ಕಾರಿ ನೌಕರರ ಸಾಧನೆ

SPORTS
ರಾಯಚೂರಿನಲ್ಲಿ ಜರುಗಿದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವಿವಿಧ ವಿಭಾಗದಲ್ಲಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ನೌಕರರು. ನೌಕರರಾದ ವೀರೇಶ, ಅಭಿಶೇಕ್ ರೆಡ್ಡಿ, ಉಮೇಶ, ಬಿ.ಪ್ರಭು, ರಂಗಯ್ಯ ಮಾಸ್ತರ್, ರಮೇಶ, ಅಮರೇಶ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ದೇವದುರ್ಗ
ರಾಯಚೂರಿನ ಮಹಾತ್ಮಗಾಂಧೀ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಸಿದ್ದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ತಾಲೂಕು ಉತ್ತಮ ಸಾಧನೆ ಮಾಡಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕ್ರೀಡಾಕೂಟ

ಕಬಡ್ಡಿ ಸ್ಪರ್ಧೆಯಲ್ಲಿ ವೀರೇಶ ನಾಯಕತ್ವದ ತಂಡ ಪ್ರಥಮ ಸ್ಥಾನ ಪಡೆದಿದೆ. ತಂಡದಲ್ಲಿ ವೀರೇಶ, ಅಭಿಶೇಕ್ ರೆಡ್ಡಿ, ಉಮೇಶ, ಬಿ.ಪ್ರಭು, ರಂಗಯ್ಯ ಮಾಸ್ತರ್, ರಮೇಶ, ಅಮರೇಶ ಇತರರಿದ್ದರು. ಇನ್ನು 100ಮೀಟರ್ ಹಾಗೂ 400ಮೀಟರ್ ಓಟದ ಸ್ಪರ್ಧೆಯಲ್ಲಿ ಆರೋಗ್ಯ ಇಲಾಖೆ ನೌಕರ ಬಿ.ಪ್ರಭು ಪ್ರಥಮ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ವಿಭಾಗದ ಥ್ರೋ ಬಾಲ್ ಸ್ಪರ್ಧೆಯಲ್ಲಿ ಕಂದಾಯ ಇಲಾಖೆಯ ದೀಪಾ, ರುಕ್ಮಿಣಿ, ಆರೋಗ್ಯ ಇಲಾಖೆ ಚಾಂದ್‌ಬೀ ಪ್ರಥಮ ಸ್ಥಾನ ಪಡೆದಿದ್ದಾರೆ. ಫುಟ್‌ಬಾಲ್ ಸ್ಪರ್ಧೆಯಲ್ಲಿ ನಾಯಕ ರಾಕೇಶ, ಉಪನಾಯಕ ಇಮಾಮ್ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆದಿದೆ.

ಇನ್ನು ಭರ್ಚಿ ಎಸೆತ ಸ್ಪರ್ಧೆಯಲ್ಲಿ ಶಿಕ್ಷಕ ಸುರೇಶ ಮಸರಕಲ್ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿದ್ದಾರೆ. ಸಂಗೀತ ವಿಭಾಗದ ಗಿಟಾರ ನುಡಿಸುವ ಸ್ಪರ್ಧೆಯಲ್ಲಿ ಅಶೋಕ ಪ್ರಥಮ ಸ್ಥಾನ ಪಡೆದಿದ್ದಾರೆ. ತುಮಕೂರಿನಲ್ಲಿ ಅ.6, 7, 8ರಂದು ಆಯೋಜಿಸಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net