ಕುಸ್ತಿಯು ಈ ಮಣ್ಣಿನ ಸೊಗಡು: ಶರಣು ಗೋಗೇರಿ

28GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ಕುಸ್ತಿ ಕ್ರೀಡೆಯು ಕನ್ನಡ ನಾಡಿನ ಮಣ್ಣಿನ ಸೊಗಡಿನ ಆಟ. ಕುಸ್ತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆಧ್ಯತೆ ಸಿಗುತ್ತಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ, ಓಲಂಪಿಕ್​ ಕ್ರೀಡೆಗಳಲ್ಲಿ ಕುಸ್ತಿ ಕ್ರೀಡೆಗೆ ಅಪಾರಮಟ್ಟದಲ್ಲಿ ಜನ ಬೆಂಬಲ ಸಿಗುತ್ತಿದೆ. ಕ್ರೀಡಾ ಇಲಾಖೆಯಿಂದ ಕುಸ್ತಿ ಕಲಿಯುತ್ತಿರುವ ಕುಸ್ತಿಪಟುಗಳು ವಿಶ್ವದರ್ಜೆಯಲ್ಲಿ ಕುಸ್ತಿ ಕಲಿತು ಜಿಲ್ಲೆಗೆ, ಇಲಾಖೆಗೆ ಹೆಸರು ತರಬೇಕು ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಶರಣು ಗೋಗೇರಿ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿವಿಧ ತೂಕದ ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕುಸ್ತಿ ಆಟದಲ್ಲಿ ತಾಳ್ಮೆ ಮತ್ತು ದೇಹದಂಡನೆ ಅತೀ ಮುಖ್ಯವಾಗಿದೆ. ಏಕಾಗೃತೆ ಜತೆಗೆ ಎದುರಾಳಿಯನ್ನು ಕಟ್ಟಿ ಹಾಕು ಚಾಣಾಕ್ಷ$್ಯತನ ಅಗತ್ಯವಿದೆ. ಅದಕ್ಕಾಗಿ ಕುಸ್ತಿಪಟುಗಳು ಉತ್ತಮ ಆಹಾರದೊಂದಿಗೆ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು. ಜಿಲ್ಲಾ ಕ್ರೀಡಾ ಇಲಾಖೆಯಿಂದ ನಿಡುತ್ತಿರುವ ಉತ್ತಮ ಪೋಷ್ಟಿಕ ಆಹಾರವನ್ನು ಸೇವಿಸುವುದರ ಮೂಲಕ ವಿವಿಧ ಮಟ್ಟದ ಕುಸ್ತಿ ಆಟಗಳಿಗೆ ತಯಾರಾಗಬೇಕು. ಕುಸ್ತಿಪಟುಗಳಿಗೆ ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುತ್ತಿದೆ, ಮುಂದೆಯೂ ಅತ್ಯುತ್ತಮ ಸೌಲಭ್ಯ ನೀಡುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುವುದು ಎಂದರು.
ಜಿಲ್ಲೆಯ ವಿವಿಧ ತಾಲೂಕಿನಿಂದ ಕುಸ್ತಿಪಟುಗಳ ಆಗಮಿಸಿದ್ದರು. 32 ಕೆಜಿ ತೂಕ, 36, 40, 45 ಕೆಜಿ ತೂಕ ಸೇರಿದಂತೆ ವಿವಿಧ ತೂಕದ ವಿಭಾಗದಲ್ಲಿ ಕುಸ್ತಿ ಜರುಗಿತು. ಪ್ರಥಮ ಸ್ಥಾನ ಪಡೆದ ಪಟುವಿಗೆ 1 ಕೆಜಿ ತುಪ್ಪ, 2ನೇ ಸ್ಥಾನ ಅರ್ಧ ಕೆಜಿ ತುಪ್ಪ ಮತ್ತು ಮೂರನೇ ಸ್ಥಾನ ಪಡೆದ ಕುಸ್ತಿಪಟುವಿಗೆ 250 ಗ್ರಾಂ ತುಪ್ಪ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕುಸ್ತಿ ಟೆನರ್​ ವಿನಾಯಕ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net