ಕರಾವಳಿ ಜನರು ಶಿಸ್ತಿಗೆ ಹೆಸರುವಾಸಿ: ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಭಿಮತ

Sports festival organized for members of the Coastal Cultural Union Mandya
Published on

ಮಂಡ್ಯ: ಕರಾವಳಿಯ ಜನರು ಕಾರ್ಯ ಚಟುವಟಿಕೆಯಲ್ಲಿ ಶಿಸ್ತು, ಬದ್ಧತೆಗೆ ಹೆಸರುವಾಸಿ ಎಂದು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಅಭಿಪ್ರಾಯಪಟ್ಟರು.

ನಗರದ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಕರಾವಳಿ ಸಾಂಸ್ಕೃತಿಕ ಒಕ್ಕೂಟದ ಸದಸ್ಯರಿಗೆ ಏರ್ಪಡಿಸಿದ್ದ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರಾವಳಿಯ ಜನ ಇಲ್ಲೇ ಇದ್ದರೂ ತಮ್ಮ ಕಲೆ, ಸಂಸ್ಕೃತಿ ಉಳಿಸಿಕೊಂಡು ಜೀವನ ನಡೆಸುವುದು. ಯಾವುದೇ ಕೆಲಸವಾದರೂ ಕ್ರಮಬದ್ಧವಾಗಿ ಮಾಡುವ ವಿಶೇಷತೆ ಮೈಗೂಡಿಸಿಕೊಂಡಿರುವುದು ಪ್ರಶಂಸನೀಯ. ಎಲ್ಲಿದ್ದರೂ ನೀವು ಸಹ ನಮ್ಮವರೇ ಎಂಬ ಅಭಿಪ್ರಾಯವ್ಯಕ್ತಪಡಿಸಿದರು.

ಒಕ್ಕೂಟದ ಗೌರವಾಧ್ಯಕ್ಷ ಡಾ.ಎಸ್.ಶ್ರೀನಿವಾಸಶೆಟ್ಟಿ, ಅಧ್ಯಕ್ಷ ಟಿ.ಸದಾಶಿವಭಟ್, ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್ ಶೆಟ್ಟಿ, ಜಂಟಿ ಕಾರ್ಯದರ್ಶಿ ಪ್ರಸನ್ನಶೆಟ್ಟಿ, ಉಪಾಧ್ಯಕ್ಷ ಸುಧಾಕರ್‌ಶೆಟ್ಟಿ, ಖಜಾಂಚಿ ಗೋಪಾಲಕೃಷ್ಣ ಶೆಣೈ, ಜಂಟಿ ಕಾರ್ಯದರ್ಶಿ ಪ್ರಸನ್ನ ಶೆಟ್ಟಿ ಇತರರಿದ್ದರು.

ಕ್ರೀಡೋತ್ಸವದ ನಂತರ ಸಂಜೆ ನಗರದ ವಿದ್ಯಾಗಣಪತಿ ದೇವಸ್ಥಾನದ ಆವರಣದ ಶಾರದ ಚಂದ್ರಮೌಳಿ ಪ್ರಾರ್ಥನಾ ಮಂದಿರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಟಿ.ಸದಾಶಿವಭಟ್, ಮಂಡ್ಯದ ಕರಾವಳಿ ಸಾಂಸ್ಕೃತಿಕ ಒಕ್ಕೂಟ ಒಂದು ದೊಡ್ಡ ಕುಟುಂಬದಂತೆ. ಜಾತಿ, ಮತ, ಪಂಥ ಭೇದವಿಲ್ಲದೆ ಎಲ್ಲರೂ ಒಂದಾಗಿ ಬದುಕು ನಡೆಸುತ್ತಿದ್ದೇವೆ ಎಂದರು.

ಇದೇ ವೇಳೆ ಹಿರಿಯರಾದ ಯು.ಡಿ.ವಿಷ್ಣುಮೂರ್ತಿಭಟ್, ಎಂ.ಬಿ.ಭಾಸ್ಕರ್‌ಶೆಟ್ಟಿ, ಗಿರಿಜಾ ಶೆಟ್ಟಿ, ಡಾ.ವೆಂಕಪ್ಪಯ್ಯ ಹೊಳ್ಳ, ತಾರಾಬಾಯಿ ಶ್ಯಾನುಭೋಗ್, ನಾಗರತ್ನ ಹತ್ವಾರ್, ಸೆಲಿನ್ ಗೊನ್ಸಾಲ್ವೆಸ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net