ಸೂರಾಲು ಗಣೆೇಶೋತ್ಸವ ಸಮಿತಿಯಿಂದ ಕ್ರೀಡೋತ್ಸವ

blm (2)
Published on

ಕಾರ್ಕಳ: ಸೂರಾಲು ಸಾರ್ವಜನಿಕ ಶ್ರೀ ಗಣೆೇಶೋತ್ಸವ ಸಮಿತಿ ವತಿಯಿಂದ ನಡೆಯಲಿರುವ 33ನೇ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಸೂರಾಲು ಗುಂಡಾಜೆ ಶಾಲಾ ಮೈದಾನದಲ್ಲಿ ಕ್ರೀಡೋತ್ಸವ ಇತ್ತೀಚೆಗೆ ನಡೆಯಿತು.

ಗಣೆೇಶೋತ್ಸವ ಸಮಿತಿ ಹಿರಿಯ ಸದಸ್ಯ ರಮೇಶ್ ದೇವಾಡಿಗ ಕ್ರೀಡೋತ್ಸವ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ತಾರಾನಾಥ ಕೋಟ್ಯಾನ್ ಸೂರಾಲು ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಸುಧಾಕರ ಎಂ.ಶೆಟ್ಟಿ, ಜಯಪ್ರಕಾಶ್ ದೇವಾಡಿಗ, ಸಮಿತಿ ಗೌರವ ಸಲಹೆಗಾರ ರಮೇಶ್ ದೇವಾಡಿಗ, ಶಾಲಾಭಿವೃದ್ಧ್ದಿ ಸಮಿತಿ ಅಧ್ಯಕ್ಷ ಉಮೇಶ್ ಕುಲಾಲ್, ಕ್ರೀಡಾ ಕಾರ್ಯದರ್ಶಿ ವಿಷ್ಣು ಕೋಟ್ಯಾನ್, ಕಾರ್ಯದರ್ಶಿ ಮಂಜುನಾಥ ಕೋಟ್ಯಾನ್, ಸಮಿತಿ ಉಪಾಧ್ಯಕ್ಷ ವಸಂತ ಕುಲಾಲ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿಶ್ಮಿತಾ ಪ್ರಾರ್ಥಿಸಿದರು. ಧನುಷ್ ರಾವ್ ಕಾರ‌್ಯಕ್ರಮ ನಿರೂಪಿಸಿದರು. ದಿಶಾ ರಾವ್ ಸ್ವಾಗತಿಸಿದರು. ಶ್ರೀಜಿತ್ ವಂದಿಸಿದರು.

ವಿವಿಧ ಆಟೋಟ ಸ್ಪರ್ಧೆ

ಕ್ರೀಡೋತ್ಸವದಲ್ಲಿ ಶಾಲಾ ಮಕ್ಕಳಿಗೆ, ಸಾರ್ವಜನಿಕ ಯುವಕ-ಯುವತಿಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು. ಸಾರ್ವಜನಿಕ ಯುವಕರ ವಾಲಿಬಾಲ್ ಪಂದ್ಯಾಟದಲ್ಲಿ ಕಜೆ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಪ್ರಥಮ, ಕುಂಭ ಕಂಠಿನಿ ಇರ್ವತ್ತೂರು ದ್ವಿತೀಯ, ಯುವಕರ ಹಗ್ಗಜಗ್ಗಾಟದಲ್ಲಿ ಜೋಡುಕಟ್ಟೆ ಫ್ರೆಂಡ್ಸ್ ಪ್ರಥಮ, ಮಲ್ಪೆ ರಾಕೇಶ್ ಪಿ.ಎಂ. ದ್ವಿತೀಯ, ಮಹಿಳೆಯರ ಹಗ್ಗಜಗ್ಗಾಟದಲ್ಲಿ ಸುನೀತಾ ಸತೀಶ್ ತಂಡ ಪ್ರಥಮ, ಸಂಗೀತ ಕೋಟ್ಯಾನ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net