ಕ್ರೀಡಾಕೂಟದ ಆಮಂತ್ರಣ ಬಿಡುಗಡೆ

New Project (23)
Published on

ಬೆಳ್ತಂಗಡಿ: ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಟ್ಲಾಜೆ ವತಿಯಿಂದ 76ನೇ ಗಣರಾಜ್ಯೋತ್ಸವ ಆಚರಣೆ ಹಾಗೂ ವಾರ್ಷಿಕ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಸಂತ ಅಂತೋನಿ ಕಾಲೇಜ್ ನಾರಾವಿ ಕನ್ನಡ ಉಪನ್ಯಾಸಕ ದಿನೇಶ್ ಬಿ.ಕೆ.ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಕ್ರಿಕೆಟ್ ಪಂದ್ಯಾಟ ನಡೆಸಲಾಯಿತು. ಸರ್ವೋದಯ ಫ್ರೆಂಡ್ಸ್ ಗೌರವ ಸಲಹೆಗಾರ ಸತೀಶ್ ರೈ ಬಾರ್ದಡ್ಕ ಅತಿಥಿಯಾಗಿದ್ದರು. ಮುಖ್ಯಶಿಕ್ಷಕ ಪ್ರಮೋದ್, ಅಶ್ರಫ್ ಕಾವಾಡಿ, ಚಿತ್ರನ್ ಕೊಂಗುಳ, ಶಾಲಾ ಸಮಿತಿ ಅಧ್ಯಕ್ಷರು ಸಂತೋಷ್ ಕೊಂಗಲ, ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷರು ಸುರೇಶ್ ಪೂಜಾರಿ ಹೆವಾ ಉಪಸ್ಥಿತರಿದ್ದರು. ಹರೀಶ್ ವೈ.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net