

ರಾಯಚೂರು ಶ್ರೀ ಮಾತೆ ಪೊಲಿಮಾರಿ ಹಾಗೂ ಶ್ರೀ ಕಂಚು ಮಾರೆಮ್ಮ ದೇವಿಯ ಜಾತ್ರಾ ಮಹೋತ್ಸವ ನಿಮಿತ್ತ ಜಿಲ್ಲಾ ಕೊರಮ, ಕೊರವ, ಕುಳುವ ಮಹಾಸಂಘದಿಂದ ಮೇ 31 ರಿಂದ ಜೂ.3 ವರಗೆ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಸಮಾಜ ಜಿಲ್ಲಾಧ್ಯಕ್ಷ ಹುಲಿಗೆಪ್ಪ ಮಾಣಿಕ್ಯ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 31 ರಿಂದ ಜೂ.03 ವರೆಗರೆ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿದೆ. ಎಲ್ಲಾ ತಾಲೂಕುಗಳಿಂದ ತಂಡಗಳು ಭಾಗವಹಿಸಲಿವೆ. ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸುವವರು ಜಾತಿ ಪ್ರಮಾಣ ಪತ್ರ, ಆಧಾರ ಕಾರ್ಡ್‌ಗಳೊಂದಿಗೆ ಭಾಗವಹಿಸುವ ತಂಡಗಳಿಗೆ ಅವಕಾಶ ನೀಡಲಾಗುತ್ತದೆ.
ಜೂ.3 ರಂದು ಗದ್ವಾಲ್ ರಸ್ತೆ ಮಡ್ಡಿಪೇಟೆ ಬಡಾವಣೆ ಕೊರವರ ಓಣಿ ಶ್ರೀವೀರಾಂಜನೇಯ ದೇವಸ್ಥಾನದಲ್ಲಿ ಕೈ ಕಲ್ಲುವ ಎತ್ತುವ ಸ್ಪರ್ಧೆ ನಡೆಯಲಿದೆ. ಮೇ.30 ರಂದು ಗಿಲ್ಲಿ ದಾಂಡು ಸ್ಪರ್ಧೆಗಳು ನಡೆಯಲಿವೆ. ಕ್ರಿಕೆಟ್ ಪಂದ್ಯದಲ್ಲಿ ಗೆಲ್ಲುವ 15 ಸಾವಿರ ರೂ. ದ್ವಿತೀಯ ಬಹುಮಾನವಾಗಿ 10 ಸಾವಿರ ರೂ. ನಗದ ಬಹುಮಾನ ನೀಡಲಾಗುತ್ತದೆ. ಕೈ ಕಲ್ಲುವ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ 5 ತೊಲೆ ಬೆಳ್ಳಿ ಕಡಗ, ದ್ವಿತೀಯ ಬಹುಮಾನ ಎರಡುವರೆ ತೊಲೆ ಬೆಳ್ಳಿ ಕಡಗ, ತೃತೀಯ ಬಹುಮಾನವಾಗಿ 1 ಸಾವಿರ ರೂ ನಗದು ಬಹುಮಾನ ನೀಡಲಾಗುತ್ತದೆ.
ಗಿಲ್ಲಿದಾಂಡು ಸ್ಪರ್ಧೆಯ ವಿಜೇತರಿಗೆ 5 ತೊಲೆ ಬೆಳ್ಳಿ ಕಡಗ, ದ್ವಿತೀಯ ಬಹುಮಾನ 2.5 ತೊಲೆ ಬೆಳ್ಳಿ ಕಡಗ, ತೃತೀಯ ಬಹುಮಾನವಾಗಿ 1 ಸಾವಿರ ರೂ ನಗದು ನೀಡಲಾಗುತ್ತದೆ. ಹೆಸರು ನೊಂದಾಯಿಸಿದವರಿಗೆ ಅವಕಾಶ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಲತಿ ಭಜಂತ್ರಿ, ಅಂಜನೇಯ, ಸುಭಾಷ, ನಾಗರಾಜ, ದೇವೆಂದ್ರ, ಯಲ್ಲಪ್ಪ, ಮಾಣಿಕರಾಜ, ರಾಮು ಇದ್ದರು.