ಕ್ರೀಡೆಗಳು ಭಾವೈಕ್ಯದ ಸಂಕೇತ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಅಭಿಪ್ರಾಯ

200722 Kavitala Zonal Level Primary Schools Sports Festival
ಕವಿತಾಳ ಸಮೀಪದ ಹಾಲಾಪುರದಲ್ಲಿ ಬುಧವಾರ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟದ ಕಾರ್ಯಕ್ರಮವನ್ನು ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಉದ್ಘಾಟಿಸಿದರು.
Published on

ಕವಿತಾಳ: ಕ್ರೀಡೆಗಳು ಭಾವೈಕ್ಯದ ಸಂಕೇತವಾಗಿದ್ದು, ಇಂತಹ ಕ್ರೀಡಾಕೂಟಗಳನ್ನು ಆಗಾಗ ಆಯೋಜಿಸುತ್ತಿರಬೇಕು ಎಂದು ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಅಭಿಪ್ರಾಯಪಟ್ಟರು.

ಹಾಲಾಪುರದಲ್ಲಿ ಬುಧವಾರ ಆಯೋಜಿಸಿದ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಸೋತವರು ಮರಳಿ ಯತ್ನ ಮಾಡಿ, ಗೆಲ್ಲಲು ಯತ್ನಿಸಬೇಕು. ಸೋಲು ಗೆಲುವಿಗೆ ಮೆಟ್ಟಿಲಾಗಿದೆ. ಅರೋಗ್ಯ ಮತ್ತು ಮಾನಸಿಕ ನೆಮ್ಮದಿಗಾಗಿ ಕ್ರೀಡೆಗಳು ಸಹಕಾರಿಯಾಗಿದೆ. ಪ್ರತಿಯೊಬ್ಬರೂ ಕ್ರೀಡಾಭಿಮಾನವನ್ನು ಬೆಳೆಸುಕೊಳ್ಳಬೇಕು ಎಂದರು.

ಕ್ರೀಡಾ ಜ್ಯೋತಿಯನ್ನು ಬಿಜೆಪಿ ಮುಖಂಡ ಪ್ರಸನ್ನ ಪಾಟೀಲ್ ಸ್ವಾಗತಿಸಿದರು. ನಂತರ ವಿವಿಧ ಕ್ರೀಡಾಕೂಟಗಳು ನಡೆದವು. ತಾಪಂ ಮಾಜಿ ಸದಸ್ಯ ಕರೆಯಪ್ಪ ಮೆಡಿಕಲ್, ಗ್ರಾಪಂ ಸದಸ್ಯರಾದ ಮೌನೇಶ, ಸುರೇಶ ಗುತ್ತೆದಾರ, ಲಕ್ಷ್ಮಣ ನಾಯಕ, ಶಿವಪ್ಪ ತುಗ್ಗಲದಿನ್ನಿ, ಮಾನ್ವಿ ಬಿಇಒ ಚಂದ್ರಶೇಖರ ದೊಡ್ಡಮನಿ, ಮಸ್ಕಿ ಪ್ರಭಾರ ಬಿಇಒ ಬಸಪ್ಪ, ಹಾಲಾಪುರ ಸಿಆರ್‌ಪಿ ಪ್ರಶಾಂತ, ತೋರಣದಿನ್ನಿ ಸಿಆರ್‌ಪಿ ಸತ್ಯವಾದಿ ತಿಪ್ಪೆಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net